Select Your Language

Notifications

webdunia
webdunia
webdunia
webdunia

ಗಡ್ಡ ತೆಗೆಯದ ಪತಿಯ ಮುಖಕ್ಕೆ ಕೋಪದಿಂದ ಕುದಿಯುವ ನೀರು ಎರಚಿದ ಪತ್ನಿ

ಗಡ್ಡ ತೆಗೆಯದ ಪತಿಯ ಮುಖಕ್ಕೆ ಕೋಪದಿಂದ ಕುದಿಯುವ ನೀರು ಎರಚಿದ ಪತ್ನಿ
ಅಲಿಗಢ , ಶನಿವಾರ, 3 ಜೂನ್ 2017 (11:11 IST)
ಅಲಿಗಢ: ಗಂಡ ಗಡ್ಡ ತೆಗೆಯಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಹೆಂಡತಿ ಕುದಿಯುವ ನೀರನ್ನೇ ಗಂಡನ ಮುಖದ ಮೇಲೆ ಎರಚಿರುವ ಘಟನೆ ಅಲಿಗಢದಲ್ಲಿ ನಡೆದಿದೆ.
 
6 ತಿಂಗಳ ಹಿಂದಷ್ಟೇ ವಿವಾಹವಗಿದ್ದ ಹಣ್ಣು ವ್ಯಾಪಾರಿ ಸಲ್ಮಾನ್ ಹಾಗೂ ನಗ್ಮಾ ದಂಪತಿಗಳು  ಗಡ್ಡದ ಕಾರಣಕ್ಕಾಗಿಯೇ ಆಗಾಗ ಜಗಳ ನಡೆಯುತ್ತಿತ್ತು. ಕಾಲಕ್ಕೆ ತಕ್ಕಂತೆ ತನ್ನ ಪತಿ ಸ್ಟೈಲೀಶ್ ಆಗಿರಬೇಕೆಂದು ಬಯಸಿದ್ದ ನಗ್ಮಾ ಪತಿಗೆ ಕುರ್ತಾ ಪೈಜಾಮ ಬಿಟ್ಟು ಪ್ಯಾಂಟ್ ಶರ್ಟ್ ಧರಿಸಬೇಕು, ಗಡ್ಡ ತೆಗೆಯಬೇಕು ಎಂದು ನಗ್ಮಾ ಪಟ್ಟು ಹಿಡಿದಿದ್ದಳು. ಅದರೆ ಸ್ಲ್ಮಾನ್ ಧಾರ್ಮಿಕ ಕಾರಣಕ್ಕಾಗಿ ಇದಕ್ಕೆ ಒಪ್ಪಿರಲಿಲ್ಲ. 
 
ಮೇ 31ರಂದು ವ್ಯಾಪಾರ ಮುಗಿಸಿ ಸಲ್ಮಾನ್ ಮನೆಗೆ ಬಂದಾಗ ಪತ್ನಿ ನಗ್ಮಾ ನೀರು ಕುದಿಸುತ್ತಿದ್ದಳು. ಇದನ್ನು ಪ್ರಶ್ನಿಸಿದಾಗ ಮೊಟ್ಟೆ ಬೇಯಿಸಲು ನೀರು ಕುದಿಸುತ್ತಿರುವುದಾಗಿ ಹೇಳಿದ್ದಳು. ನಂತರ ಅ ನೀರನ್ನು ಸಲ್ಮಾನ್ ಮೇಲೆ ಎರಚಿಬಿಟ್ಟಿದ್ದಾಳೆ. ಸಲ್ಮಾನ್ ನ ಮುಖ್ಯ-ತೋಳು ಶೇ.20ರಷ್ಟು ಸುಟ್ಟು ಹೋಗಿದೆ. ಉರಿತಾಳಲಾರದೇ ಕಿರುಚಿದಾಗ ಅಕ್ಕ-ಪಕ್ಕದವರು ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ನನಗಾಗಿ ವಿಶೇಷ ವ್ಯವಸ್ಥೆ ಮಾಡಬೇಡಿ ಎಂದು ಹುಕುಂ ಹೊರಡಿಸಿದ ಸಿಎಂ ಯೋಗಿ