Select Your Language

Notifications

webdunia
webdunia
webdunia
webdunia

ಪುತ್ರಿಗೆ ವಿವಾಹದ ಉಡುಗೊರೆಯಾಗಿ ಗೋವು ನೀಡಿದ ಮುಸ್ಲಿಂ ತಂದೆ

ಪುತ್ರಿಗೆ ವಿವಾಹದ ಉಡುಗೊರೆಯಾಗಿ ಗೋವು ನೀಡಿದ ಮುಸ್ಲಿಂ ತಂದೆ
ರೋಹ್ಟಕ್ , ಮಂಗಳವಾರ, 11 ಏಪ್ರಿಲ್ 2017 (13:57 IST)
ಗೋವು ರಕ್ಷಕರು ಕೆಲವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಸಂದರ್ಭದಲ್ಲಿಯೇ ಮುಸ್ಲಿಂ ತಂದೆಯೊಬ್ಬ ತನ್ನ ಪುತ್ರಿಗೆ ವಿವಾಹದ ವಿಶೇಷ ಕೊಡುಗೆಯಾಗಿ ಗೋವು ನೀಡಿ ಅಚ್ಚರಿ ಮೂಡಿಸಿದ್ದಾನೆ. 
 
ಹರಿಯಾಣಾದ ಸೋನಿಪತ್ ಜಿಲ್ಲೆಯಲ್ಲಿ ಮುಸ್ಲಿಂ ತಂದೆ, ಪುತ್ರಿಗೆ ವಿವಾಹದ ಕೊಡುಗೆಯಾಗಿ ಗೋವು ನೀಡಿದ ಘಟನೆ ವರದಿಯಾಗಿದೆ.   
 
ಮುಸ್ಲಿಂ ಸಮುದಾಯದ ನೂರ್ ಖಾನ್ ಎನ್ನುವವರು ಖಾರ್ಕೋಡಾ ಗ್ರಾಮದಲ್ಲಿ ನಡೆದ ತನ್ನ ಪುತ್ರಿ ಗುಲ್ಶಾನಾ ವಿವಾಹ ಕಾರ್ಯಕ್ರಮದಲ್ಲಿ ವಿಶೇಷ ಉಡುಗೊರೆಯಾಗಿ ಗೋವು ನೀಡಿದ್ದಾರೆ.      
 
ನೂರ್ ಖಾನ್, ಪುತ್ರಿಗೆ 13 ಸಾವಿರ ರೂಪಾಯಿ ಮೌಲ್ಯದ ದೇಶಿಯ ತಳಿಯ ಗೋವು ನೀಡಿದ್ದಾರೆ. ಪುತ್ರಿಗೆ ಗೋವುಗಳ ಮೇಲೆ ತುಂಬಾ ಪ್ರೀತಿ. ಮನೆಯ ಮುಂದೆ ಗೋವುಗಳು ಬಂದಲ್ಲಿ ಅವುಗಳಿಗೆ ಬ್ರೆಡ್ ಮತ್ತು ಬೆಲ್ಲ ನೀಡುತ್ತಿದ್ದಳು.ನನ್ನ ಮನೆಯಲ್ಲಿ ಸ್ಥಳದ ಕೊರತೆಯಿಂದಾಗಿ ಗೋವು ಸಾಕಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.     
 
ಹರಿಯಾಣಾದಲ್ಲಿಯೇ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ಪುತ್ರಿಯ ವಿವಾಹದ ಕೊಡುಗೆಯಾಗಿ ಗೋವು ನೀಡಿರುವುದು ಮೊದಲನೆಯ ಘಟನೆಯಾಗಿರಬಹುದು ಎನ್ನಲಾಗಿದೆ. 
 
ತಂದೆಯ ಕೊಡುಗೆಯಿಂದ ತುಂಬಾ ಸಂತೋಷಗೊಂಡಿರುವ ಗುಲ್ಶಾನಾ, ನಮ್ಮ  ಅತ್ತೆ ಮಾವನ ಮನೆಯಲ್ಲಿ ಪ್ರೀತಿಯಿಂದ ಹಸುವನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದಾಳೆ.    
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರು-ಬೆಂಗಳೂರು ಬಸ್ ಅಪಘಾತ: 30 ಕ್ಕೂ ಹೆಚ್ಚು ಜನರಿಗೆ ಗಾಯ