Select Your Language

Notifications

webdunia
webdunia
webdunia
webdunia

ಮಹಿಳಾ ಕೈದಿಯ ಗುಪ್ತಾಂಗದಲ್ಲಿ ಲಾಠಿ ತೂರಿದ ಜೈಲು ಸಿಬ್ಬಂದಿ

ಮಹಿಳಾ ಕೈದಿಯ ಗುಪ್ತಾಂಗದಲ್ಲಿ ಲಾಠಿ ತೂರಿದ ಜೈಲು ಸಿಬ್ಬಂದಿ
ಮುಂಬೈ: , ಭಾನುವಾರ, 2 ಜುಲೈ 2017 (16:28 IST)
ಬೈಕುಲ್ಲಾ ಜೈಲಿನ ಅಧಿಕಾರಿಗಳು ಚಿತ್ರಹಿಂಸೆ ನೀಡಿದ್ದಲ್ಲದೇ ಗುಪ್ತಾಂಗದಲ್ಲಿ ಲಾಠಿ ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಕೈದಿ ಸಾವನ್ನಪ್ಪಿದ್ದಾಳೆ 
 
ಬೆಳಗಿನ ಉಪಹಾರದಲ್ಲಿ ಎರಡು ಮೊಟ್ಟೆ ಮತ್ತು ಐದು ಬ್ರೆಡ್ ತುಣುಕುಗಳು ಕಾಣೆಯಾಗಿವೆ ಎಂದು ಮಹಿಳಾ ಕೈದಿ ಮಂಜುಳಾ ಶೇಟೆ, ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಳು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಜೈಲಿನ ಅಧಿಕಾರಿಗಳು ಆಕೆಯ ಮೇಲೆ ದೌರ್ಜನ್ಯ ಎಸಗಿದ್ದರು ಎಂದು ಮೂಲಗಳು ತಿಳಿಸಿವೆ.
 
ಪ್ರತ್ಯಕ್ಷ ದರ್ಶಿಯ ಹೇಳಿಕೆಯಿಂದ ಜೈಲು ಅಧಿಕಾರಿಗಳ ಅಮಾನವೀಯ ನಡವಳಿಕೆ ಬಹಿರಂಗವಾಗಿದೆ. ಮಂಜುಳಾ ಸಾವಿಗೆ ಸಂಬಂಧಿಸಿದಂತೆ ಆರು ಮಂದಿ ಜೈಲು ಸಿಬ್ಬಂದಿಯನ್ನು ಬಂಧಿಸಲಾಗಿದೆ. ಮಂಜುಳಾ ಸಾವಿನಿಂದ ಆಕ್ರೋಶಗೊಂಡ ಕೈದಿಗಳು ಜೈಲಿನಲ್ಲಿ ಭಾರಿ ಬಂಡಾಯ ತೋರಿದ್ದರು. ಪುತ್ರಿ ಶೀನಾ ಬೋರಾ ಹತ್ಯೆಯಲ್ಲಿ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ವಿರುದ್ಧ ಬಂಡಾಯಕ್ಕೆ ಪ್ರೇರಣೆ ನೀಡಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು.
 
ಬೆಳಗಿನ ಉಪಹಾರದಲ್ಲಿ ಎರಡು ಮೊಟ್ಟೆ ಮತ್ತು ಐದು ಬ್ರೆಡ್ ತುಣುಕುಗಳು ಕಾಣೆಯಾಗಿವೆ ಎಂದು ಮಂಜುಳಾ ಆರೋಪಿಸಿದ್ದರಿಂದ ಆಕ್ರೋಶಗೊಂಡು ಜೈಲಿನ ಅಧಿಕಾರಿ ಮನೀಶಾ ಪೊಕಾರ್ಕರ್‌ ಆಕೆಯಮನ್ನು ತಮ್ಮ ಚೇಂಬರ್‌ಗೆ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ. 
 
ಜೈಲಿನ ಕೆಲ ಮಹಿಳಾ ಪೇದೆಗಳು, ಮಂಜುಳಾ ಇರುವ ಬ್ಯಾರೆಕ್‌ಗೆ ನುಗ್ಗಿದ ಬಿಂದು ನಾಯಿಕಾಡೆ, ವಸೀಮಾ ಶೇಖ್, ಶೀತಲ್ ಶೇಗಾಂವಕರ್, ಸುರೇಕಾ ಗುಲ್ವೆ ಮತ್ತು ಆರತಿ ಶಿಂಗಾಣೆ ಮಂಜುಳಾರನ್ನು ನಗ್ನಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮೂಲಗಳು ತಿಳಿಸಿವೆ.
 
ಜೈಲಿನ ಮಹಿಳಾ ಪೇದೆಗಳಾದ ಬಿಂದು ಮತ್ತು ಸುರೇಖಾ ಮಂಜುಳಾರ ಎರಡು ಕಾಲುಗಳನ್ನು ಅಗಲಿಸಿ ಹಿಡಿದಾಗ ವಸೀಮಾ ಎನ್ನುವ ಮಹಿಳಾ ಪೇದೆ ಆಕೆಯ ಗುಪ್ತಾಂಗದಲ್ಲಿ ಲಾಠಿ ತೂರಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
 
ಗುಪ್ತಾಂಗದಿಂದ ರಕ್ತ ಸೋರುತ್ತಿದ್ದರೂ ಜೈಲು ಸಿಬ್ಬಂದಿ ಕ್ಯಾರೆ ಎನ್ನಲಿಲ್ಲ. ಆದರೆ, ಆಕೆ ಮೂರ್ಛೆ ಹೋದ ನಂತರ ಜೆಜೆ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಜುಳಾ ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ತಿಳಿಸಿವೆ.
 
ಜೈಲಿನ ಆರು ಮಹಿಳಾ ಪೇದೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನ ನಿಲ್ದಾಣದ ಆವರಣದಲ್ಲಿಯೇ ಬಿಜೆಪಿ ಸಭೆ ನಡೆಸಿದ ಅಮಿತ್ ಶಾ