Select Your Language

Notifications

webdunia
webdunia
webdunia
webdunia

ನೋಟು ನಿಷೇಧ ಬಯಲಿಗೆ ತಂದ ಅತ್ಯಾಚಾರ

ನೋಟು ನಿಷೇಧ ಬಯಲಿಗೆ ತಂದ ಅತ್ಯಾಚಾರ
ಮುಂಬೈ , ಸೋಮವಾರ, 14 ನವೆಂಬರ್ 2016 (11:07 IST)
ಪ್ರಧಾನಿ ನರೇಂದ್ರ ಮೋದಿ ಏಕಾಏಕಿ ದೊಡ್ಡ ನೋಟುಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದು ಅನೇಕ ಪರಿಣಾಮಗಳನ್ನು ಬೀರುತ್ತಿದೆ. ಈ ನಿಷೇಧ ಬಹುದೊಡ್ಡ ಅಪರಾಧವೊಂದು ಬಯಲಿಗೆ ಬರಲು ಕಾರಣವಾಗಿದೆ. 

ಮುಂಬೈನ ಕಾಂಡಿವಲಿಯಲ್ಲಿ ಮಹಿಳೆಯೋರ್ವರು ತಾವು ಬೀರುವನಲ್ಲಿ ಇಟ್ಟಿದ್ದ ಹಣವನ್ನು ಪರೀಕ್ಷಿಸಲು ಹೋದಾಗ ಅಲ್ಲಿಂದ ಅದು ನಾಪತ್ತೆಯಾಗಿತ್ತು. ಹೌಹಾರಿದ ಮಹಿಳೆ ತನ್ನ ಮಗಳಲ್ಲಿ ಕೇಳಿದಾಗ ಆಕೆ ತಾನು ಹಣವನ್ನು ಕದ್ದಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಆ ಹಣವನ್ನು ತಾನು ಏನು ಮಾಡಿದೆ ಎಂದಾಕೆ ಹೇಳಿದಾಗ ತಾಯಿಗೆ ದಿಕ್ಕೇ ತೋಚದಂತಾಯಿತು. 
 
16 ವರ್ಷದ ವಿದ್ಯಾರ್ಥಿನಿ ಮನೆಯಲ್ಲಿದ್ದ ಸುಮಾರು 3.8 ಲಕ್ಷ ನಗದು, ಚಿನ್ನಾಭರಣವನ್ನು ತನ್ನ ಪ್ರಿಯಕರನಿಗೆ ನೀಡಿದ್ದಾಗಿ ಹೇಳಿದ್ದಾಳೆ. ಕಾರಣ 17 ವರ್ಷದ ಆಕೆಯ ಸ್ನೇಹಿತ ಆಕೆಯ ಮೇಲೆ ಅತ್ಯಾಚಾರವೆಸಗಿ ವಿಡಿಯೋ ಚಿತ್ರೀಕರಿಸಿಕೊಂಡು ಅದನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದ. ಪ್ರತಿಯಾಗಿ ಹಣಕ್ಕೆ ಬೇಡಿಕೆ ಇಡುತ್ತಿದ್ದ.
 
ತನ್ನನ್ನು ಮದುವೆಯಾಗುವುದಾಗಿ ಹೇಳಿ ಅತ್ಯಾಚಾರ ಮಾಡಿದ ಆತ ಹಣವನ್ನು ಲಪಟಾಯಿಸಿದ ಎಂದು ಬಾಲಕಿ ತಾಯಿ ಬಳಿ ನೋವನ್ನು ತೋಡಿಕೊಂಡಿದ್ದಾಳೆ.
 
ಮತ್ತೀಗ ಪೀಡಿತಳ ತಾಯಿ ಮುಂಬೈನ ಮಲ್ವಾಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಪ್ರಾಪ್ತ ಆರೋಪಿ ಈಗ ಪೊಲೀಸರ ವಶದಲ್ಲಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನೋಟು ನಿಷೇಧ: ಹಣ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆ