Select Your Language

Notifications

webdunia
webdunia
webdunia
webdunia

ನಕಲಿ ಪೋಲಿಸನಿಂದ ಮಾಡೆಲ್‌ ಮೇಲೆ ಲೈಂಗಿಕ ದೌರ್ಜನ್ಯ

ಸುದೀಪ್ ಬಿಸ್ವಾಸ್
ಮುಂಬೈ , ಸೋಮವಾರ, 18 ಜುಲೈ 2016 (17:00 IST)
ಮಾಡೆಲ್ ವೃತ್ತಿಯಲ್ಲಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಂಚಾತಾರಾ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಬಿಎ ಪದವೀಧರನನ್ನು ಪೊಲೀಸರು ಬಂಧಿಸಿದ್ದಾರೆ.
 
ನಾರಿಮನ್ ಪಾಯಿಂಟ್‌ನಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿ ಸುದೀಪ್ ಬಿಸ್ವಾಸ್ ನೆರುಲ್ ಪ್ರದೇಶದಲ್ಲಿ ವಾಸವಾಗಿದ್ದ ಎನ್ನಲಾಗಿದೆ. 
 
ಮಾಡಲಿಂಗ್‌ಗಾಗಿ ಹೊಸ ಮುಖಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ ಎಂದು ಯುವತಿಗೆ ಆಮಿಷ ತೋರಿಸಿ ಹೋಟೆಲ್‌ ಕೋಣೆಗೆ ಕರೆದುಕೊಂಡ ಬಂದ ಆರೋಪಿ ಬಿಸ್ವಾಸ್, ಆಕೆಯ ಖಾಸಗಿ ವಸ್ತುಗಳನ್ನು ಬಲವಂತವಾಗಿ ತೆಗೆದುಕೊಂಡಿದ್ದಲ್ಲದೇ ನಟನೊಂದಿಗಿರುವ ವಿವಾದ ಬಗೆಹರಿಸಲು 1 ಲಕ್ಷ ರೂಪಾಯಿಗಳನ್ನು ನೀಡುವಂತೆ ಒತ್ತಾಯಿಸಿದ್ದ ಎನ್ನಲಾಗಿದೆ.
 
ಆರೋಪಿ ಸುದೀಪ್ ಬಿಸ್ವಾಸ್ ತನ್ನನ್ನು ತಾನು ಪೊಲೀಸ್ ವೃತ್ತಿಯಲ್ಲಿರುವುದಾಗಿ ಪರಿಚಯಿಸಿಕೊಂಡು ಬಿಸ್ವಾಸ್, ನೀನು ವೇಶ್ಯಾವೃತ್ತಿಯಲ್ಲಿ ತೊಡಗಿರುವ ಬಗ್ಗೆ ಪೊಲೀಸರಿಗೆ ತಿಳಿದಿದೆ. ಒತ್ತಾಯಪೂರ್ವಕವಾಗಿ ಆಕೆಯ ಅರೆನಗ್ನ ಚಿತ್ರಗಳನ್ನು ತೆಗೆದುಕೊಂಡಿದ್ದಲ್ಲದೇ ತಾನೊಬ್ಬಳು ಕಾಲ್ ಗರ್ಲ್‌ ಎಂದು ನೀಡಿದ ಹೇಳಿಕೆಯನ್ನು ಸೆಲ್‌ಫೋನ್‌ನಲ್ಲಿ ರಿಕಾರ್ಡ್ ಮಾಡಿಕೊಂಡಿದ್ದಾನೆ.
 
ಆರೋಪಿ ಬಿಸ್ವಾಸ್ ಯುವತಿಯ ಸೆಲ್‌ಫೋನ್, 1.50 ಲಕ್ಷ ರೂ ಬೆಲೆಬಾಳುವ ಚಿನ್ನದ ಸರ ಕಸಿದುಕೊಂಡು 50 ಸಾವಿರ ರೂಪಾಯಿ ನೀಡದಿದ್ದಲ್ಲಿ ಅರೆನಗ್ನ ಚಿತ್ರಗಳನ್ನು ಇಂಟರ್‌ನೆಟ್‌ನಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ. 
 
ಕೊನೆಗೆ ಯುವತಿ ಆರೋಪಿ ಬಿಸ್ವಾಸ್ ಕಿರುಕುಳ ತಾಳದೆ ಮರೈನ್ ಡ್ರೈವ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ದೂರಿನ ಅನ್ವಯ ಆರೋಪಿ ಬಿಸ್ವಾಸ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಪ್ರದೇಶ ಚುನಾವಣೆ: ಬಿಜೆಪಿ ಸಿಎಂ ಅಭ್ಯರ್ಥಿ ಘೋಷಣೆಗೆ ಮೀನಾಮೇಷ