Webdunia - Bharat's app for daily news and videos

Install App

ಮುಂಬೈ, ಶಸ್ತ್ರಚಿಕಿತ್ಸೆ ಬೆನ್ನಲ್ಲೇ ಐವರಿಗೆ ಕಣ್ಣಿನ ಸೋಂಕು: ವೈದ್ಯರ ವಿರುದ್ಧ ಎಫ್‌ಐಆರ್‌

Sampriya
ಬುಧವಾರ, 6 ಆಗಸ್ಟ್ 2025 (15:12 IST)
Photo Credit X
ಥಾಣೆ: ನವಿ ಮುಂಬೈನ ಪ್ರಮುಖ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರ ಐವರು ರೋಗಿಗಳು ಗಂಭೀರ ಕಣ್ಣಿನ ಸೋಂಕಿನಿಂದ ಬಳಲುತ್ತಿದ್ದಾರೆ.

ಇದೀಗ ಪರವಾನಗಿ ಇಲ್ಲದೆ ಶಸ್ತ್ರಚಿಕಿತ್ಸೆ ನಡೆಸಿದ ಇಬ್ಬರು ನೇತ್ರ ತಜ್ಞರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಹಾರಾಷ್ಟ್ರದ ನವಿ ಮುಂಬೈ ಟೌನ್‌ಶಿಪ್‌ನಲ್ಲಿರುವ ವಾಶಿಯಲ್ಲಿರುವ ಖಾಸಗಿ ಕಣ್ಣಿನ ಆಸ್ಪತ್ರೆಯಲ್ಲಿ ಡಿಸೆಂಬರ್ 2024 ಮತ್ತು ಮಾರ್ಚ್ 2025 ರಲ್ಲಿ ವೇಳೆ ನಡೆಸಿದ ಕಣ್ಣಿನ ಶಸ್ತ್ರಚಿಕಿತ್ಸೆಯ ರೋಗಿಗಳಲ್ಲಿ ಗಂಭೀರ ಸೋಂಕಿನ ಸಮಸ್ಯೆ ಕಂಡುಬಂದಿದೆ. 

ಆರೋಪಿ ವೈದ್ಯರು ದುಡುಕಿನ, ಆತುರ ಮತ್ತು ನಿರ್ಲಕ್ಷ್ಯದ ರೀತಿಯಲ್ಲಿ ನೇತ್ರ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ, 65 ವರ್ಷಕ್ಕಿಂತ ಮೇಲ್ಪಟ್ಟ ದಂಪತಿಗಳು ಸೇರಿದಂತೆ ಐವರು ರೋಗಿಗಳಿಗೆ ತೀವ್ರ ಕಣ್ಣಿನ ಗಾಯಗಳಾಗಿವೆ. ಶಸ್ತ್ರಚಿಕಿತ್ಸೆಯ ನಂತರ ಸಂತ್ರಸ್ತರಿಗೆ ಸ್ಯೂಡೋಮೊನಾಸ್ ವೈರಸ್‌ನಿಂದ ಉಂಟಾದ ಗಂಭೀರ ಸೋಂಕುಗಳು ಪತ್ತೆಯಾಗಿವೆ ಎಂದು ವಾಶಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಅವಧಿಯಲ್ಲಿ ಮಹಾರಾಷ್ಟ್ರ ಮೆಡಿಕಲ್ ಕೌನ್ಸಿಲ್‌ನಿಂದ ತಮ್ಮ ಪರವಾನಗಿಗಳನ್ನು ಅಗತ್ಯವಾಗಿ ನವೀಕರಿಸದೆಯೇ ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ ಎಂದು ಅವರು ಹೇಳಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಕ್ಟೋರಿಯಾ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ದಿಡೀರ್ ಭೇಟಿ ಹಿಂದಿನ ಕಾರಣ ಇಲ್ಲಿದೆ

ಧರ್ಮಸ್ಥಳ: ನಿರ್ಣಾಯಕ ಘಟಕ್ಕೆ ತಲುಪುತ್ತಿರುವಾಗಲೇ ಮತ್ತೊಬ್ಬ ಅಪರಿಚಿತ ಎಂಟ್ರಿ

ಚೀನಾಗೆ ಪ್ರಧಾನಿ ಮೋದಿ ಮಹತ್ವದ ಭೇಟಿ

22ತಿಂಗಳಲ್ಲಿ 300ಲೀಟರ್‌ ಹೆಚ್ಚು ಎದೆಹಾಲು ದಾನ: ಏಷ್ಯಾ ಬುಕ್‌ ಆಫ್ ರೆಕಾರ್ಡ್‌ ಸೇರಿದ ತಮಿಳುನಾಡಿ ಮಹಿಳೆ

ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ: ರಾಹುಲ್ ಗಾಂಧಿಗೆ ಬಿಗ್ ರಿಲೀಫ್‌

ಮುಂದಿನ ಸುದ್ದಿ
Show comments