Select Your Language

Notifications

webdunia
webdunia
webdunia
webdunia

ಪುತ್ರನನ್ನು ಸೈಡ್‌ಗಿಟ್ಟು ಸಹೋದರ ಪ್ರೇಮ ಮೆರೆದ ಮುಲಾಯಂ

ಪುತ್ರನನ್ನು ಸೈಡ್‌ಗಿಟ್ಟು ಸಹೋದರ ಪ್ರೇಮ ಮೆರೆದ ಮುಲಾಯಂ
ಲಕ್ನೋ , ಸೋಮವಾರ, 24 ಅಕ್ಟೋಬರ್ 2016 (12:48 IST)
ಪಕ್ಷದಲ್ಲಿ ಎದ್ದಿರುವ ಭಿನ್ನಮತವನ್ನು ಶಮನಗೊಳಿಸಲು ಇಂದು ಲಕ್ನೋನಲ್ಲಿ ನಡೆಸಿದ ಪಕ್ಷದ ವರಿಷ್ಠರ ಸಭೆಯಲ್ಲಿ ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಯಾದವ್ ತಮ್ಮ ಮಗನನ್ನು ಬದಿಗಿಟ್ಟು ಪಕ್ಷವನ್ನು ಕಟ್ಟುವಾಗ ತಮಗೆ ಹೆಗಲಾಗಿದ್ದ ಸಹೋದರ ಶಿವಪಾಲ್ ಸಿಂಗ್ ಮತ್ತು ಪಕ್ಷದ ಮತ್ತೊಬ್ಬ ವರಿಷ್ಠ ಅಮರ್ ಸಿಂಗ್ ಪರವಾಗಿ ನಿಂತಿದ್ದಾರೆ.

ಬದಲಾವಣೆ ತರುವವರನ್ನು ಮುಂದಕ್ಕೆ ಕರೆದುಕೊಂಡು ಬಂದೆ. ಅಧಿಕಾರ ಸಿಗುತ್ತಲೇ ನಿಮ್ಮ ತಲೆ ಕೆಟ್ಟು ಹೋಗಿದೆ. ಕೆಲ ನಾಯಕರಿಗೆ ಮೂಗು ತೂರಿಸುವದಷ್ಟೇ ಕೆಲಸ. ಕಿರುಚಾಡೋರನ್ನ ಪಕ್ಷದಿಂದ ಹೊರಕ್ಕೆ ಹಾಕ್ತಿನಿ ಎಂದು ಮುಲಾಯಂ ಗುಡುಗಿದ್ದು, ಎಲ್ಲು ಕೂಡ ಮಗನ ಹೆಸರನ್ನು ಪ್ರಸ್ತಾಪಿಸದೇ ಮಗ ಪಕ್ಷ ಬಿಟ್ಟು ಹೋದರೂ ಚಿಂತೆ ಇಲ್ಲ ಎನ್ನುವ ಇಂಗಿತವನ್ನು ಹೊರಹಾಕಿದ್ದಾರೆ.
 
ಪಕ್ಷ ಕಟ್ಟುವಾಗ ನಾನು ಸಹೋದರನ ಜತೆಗಿದ್ದೆ. ತುರ್ತು ಪರಿಸ್ಥಿತಿಯಲ್ಲಿ  ಮುಲಾಯಂ ಜೈಲಿಗೆ ಹೋದಾಗ ನಾನು ಪಕ್ಷವನ್ನು ನಿಭಾಯಿಸಿದ್ದೇನೆ. ಆದರೆ ನನ್ನಿಂದ ಅಧಿಕಾರವನ್ನು ಕಸಿಯಲಾಯ್ತು. ನನ್ನದೇನು ತಪ್ಪಿತ್ತು, ಇದೆಲ್ಲ ನನಗೆ ದುಃಖ ತಂದಿದೆ ಎಂದು ಮುಲಾಯಂ ಸಹೋದರ ಶಿವಪಾಲ್ ಸಿಂಗ್ ತಮ್ಮ ನೋವನ್ನು ಹೊರಹಾಕಿದ್ದಾರೆ. 
 
ಗಂಗಾಜಲ ಮುಟ್ಟಿ ಪ್ರಮಾಣ ಮಾಡುತ್ತೇನೆ ಅಖಿಲೇಶ್ ಯಾದವ್ ಹೊಸ ಪಕ್ಷ ಕಟ್ಟಲು, ವಿರೋಧಪಕ್ಷದವರ ಜತೆ ಮೈತ್ರಿ ಮಾಡಿಕೊಳ್ಳಲು ತಯಾರಾಗಿದ್ದರು ಎಂದು ಗುಡುಗಿರುವ ಶಿವಪಾಲ್, ಪಕ್ಷವನ್ನು ಉಳಿಸಿಕೊಳ್ಳಲು ಯಾವ ತ್ಯಾಗಕ್ಕೂ ಸಿದ್ಧ ಎಂದಿದ್ದಾರೆ. 
 
ಅಮರ್ ಸಿಂಗ್ ಪರವೂ ವಾದಿಸಿದ ಮುಲಾಯಂ, ಸಿಂಗ್ ಇಲ್ಲದಿದ್ದರೆ ನಾನು ಜೈಲು ಸೇರುತ್ತಿದ್ದೆ. ನನ್ನನ್ನು ರಕ್ಷಿಸಿದ ಅವರ ಬಗ್ಗೆ ನೀನು ಮಾತನಾಡುತ್ತೀಯಾ? ಆತ ನನ್ನ ಸಹೋದರನಿದ್ದಂತೆ ಎಂದು ಬಹಿರಂಗವಾಗಿಯೇ ತಮ್ಮ ಪುತ್ರನ ವಿರುದ್ಧ ಹರಿಹಾಯ್ದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಯಾದವೀ ಕಲಹ: ಅಪ್ಪ ನನ್ನ ಗುರು ಎಂದ ಅಖಿಲೇಶ್