Select Your Language

Notifications

webdunia
webdunia
webdunia
webdunia

ಮಗ 'ಕೈ' ಮಿಲಾಯಿಸಿದ, ಅಪ್ಪ ತೊಡೆ ತಟ್ಟಿದ

ಮಗ 'ಕೈ' ಮಿಲಾಯಿಸಿದ, ಅಪ್ಪ ತೊಡೆ ತಟ್ಟಿದ
ಲಖನೌ , ಮಂಗಳವಾರ, 31 ಜನವರಿ 2017 (08:07 IST)
ಸಮಾಜವಾದಿ ಪಕ್ಷದ ಮೇಲಿನ ಹಿಡಿತಕ್ಕೆ ಸಂಬಂಧಿಸಿದಂತೆ ನಡೆದ ಹೋರಾಟದಲ್ಲಿ ಸೋತಿರುವ ಮುಲಾಯಂ ಸಿಂಗ್ ಯಾದವ್, ಮತ್ತೀಗ ಮಗನ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿದ್ದಾರೆ. 
ಸಮಾಜವಾದಿ ಪಕ್ಷದ ಹಾಲಿ ಮುಖ್ಯಸ್ಥ ಅಖಿಲೇಶ್ ಯಾದವ್, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದು, ಸಹ ಮುಲಾಯಂ ಅತೃಪ್ತಿಯನ್ನು ಹೆಚ್ಚಿಸಿದ್ದು, ಕಾಂಗ್ರೆಸ್‌ಗೆ ಬಿಟ್ಟುಕೊಟ್ಟ ಎಲ್ಲ 105 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸುವಂತೆ ತಮ್ಮ ನಿಷ್ಠ ಬೆಂಬಲಿಗರಿಗೆ ಅವರು ಕರೆ ನೀಡಿದ್ದಾರೆ. ಈ ಮೂಲಕ ಅಖಿಲೇಶ್ ತಮ್ಮ ನಿಷ್ಠರನ್ನು  ಕಡೆಗಣಿಸಿದ್ದಾರೆ ಎಂಬ ಅಸಮಧಾನವನ್ನು ತೀರಿಸಿಕೊಂಡಿದ್ದಾರೆ. 
 
ಉತ್ತರ ಪ್ರದೇಶಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಎರಡು ಹಂತಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಗಿದಿದೆ. ಮುಲಾಯಂ ಅವರ ಕರೆಯಂತೆ ಅವರ ನಿಷ್ಠರು ಕಣಕ್ಕಿಳಿದಲ್ಲಿ ಕಾಂಗ್ರೆಸ್ ಸಮಾಜವಾದಿ ಬಂಡಾಯ ಅಭ್ಯರ್ಥಿಗಳ ಸವಾಲಿನ ಬಿಸಿಯನ್ನು ಎದುರಿಸಬೇಕಾಗುತ್ತದೆ. ಮುಲಾಯಂ ಈ ನಡೆ ಕಾಂಗ್ರೆಸ್ ಗೆಲುವಿನ ಅವಕಾಶಕ್ಕೆ ಪೆಟ್ಟುಕೊಡುವುದಂತೂ ಸತ್ಯ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಹ್ಮದ್ ಪಟೇಲ್, ಸೋನಿಯಾ ಗಾಂಧಿ ಕರೆ ಮಾಡಿದ್ದು ಮುಗಿದ ಅಧ್ಯಾಯ: ಎಸ್.ಎಂ.ಕೃಷ್ಣ