Publish Date: Tue, 26 Apr 2016 (19:31 IST)
Updated Date: Tue, 26 Apr 2016 (19:33 IST)
ಇಂಡಿಯನ್ ಮುಜಾಹಿದಿನ್ ಉಗ್ರಗಾಮಿ ಸಂಘಟನೆಯ ಉಗ್ರನೊಬ್ಬನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಮುಂಬೈನ ಜವೇರಿ ಬಜಾರ್ ಸ್ಫೋಟದಲ್ಲಿ ಆರೋಪಿಯಾಗಿದ್ದ ಜೈನುಲ್ ಅಬೇದಿನ್, ದೇಶ ತೊರೆದು ವಿದೇಶಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಆತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ.
ಜೈನುಲ್ ಅಬೇದಿನ್ ಚಲನವಲನಗಳ ಬಗ್ಗೆ ಮಾಹಿತಿ ಪಡೆದ ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳ ತಂಡ ಅತನನ್ನು ಬಂಧಿಸಿದೆ.
ಮುಂಬೈ ಝವೇರಿ ಬಜಾರ್ ಸ್ಫೋಟದ ಉಗ್ರರಿಗೆ ಸ್ಫೋಟಕಗಳನ್ನು ನೀಡಿದ್ದಲ್ಲದೇ ಮತ್ತಿತರ ನೆರವು ನೀಡಿದ್ದನು ಎಂದು ಮುಂಬೈ ಪೊಲೀಸ್ ಅಧಿಕಾರಿ ಮೂಲಗಳು ತಿಳಿಸಿವೆ.