Publish Date: Tue, 26 Apr 2016 (15:04 IST)
Updated Date: Tue, 26 Apr 2016 (16:18 IST)
ಲೋಕಸಭಾ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಸೋಮವಾರ ಸಮ ಬೆಸ ಸಂಖ್ಯೆಯ ವಾಹನ ಚಾಲನೆ ನಿಯಮದ ಬಗ್ಗೆ ಕಿಡಿಕಾರಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದಾರೆ.
ಕೇಜ್ರಿವಾಲ್ 'ಸೈಕೋಪಾತ್ ಮುಖ್ಯಮಂತ್ರಿ', ಸಮ ಬೆಸ ಯೋಜನೆ ಅಗ್ಗದ ಜನಪ್ರಿಯತೆಗಳಿಸಲು ಮಾಡಿದ ತಂತ್ರ ಎಂದು ರಾಷ್ಟ್ರೀಯ ಜನತಾ ದಳದ ನಾಯಕ ಮಾಜಿ ನಾಯಕ ಟೀಕಿಸಿದ್ದಾರೆ.
ಲೋಕಸಭೆಯ ಶೂನ್ಯವೇಳೆಯಲ್ಲಿ ಸಮ ಬೆಸ ಯೋಚನೆಯ ಬಗ್ಗೆ ಕಿಡಿಕಾರಿದ ಪಪ್ಪು ಯಾದವ್, ಇದು ಸಿಎನ್‌ಜಿ ಕಂಪನಿ ಮತ್ತು ಬಸ್ ಉತ್ಪಾದಕರಿಗೆ ಲಾಭ ತರವಂತದ್ದು ಎಂದಿದ್ದಾರೆ.
ಕಾರುಗಳು ಕೇವಲ ಶೇ. 5 ರಷ್ಟು ಮಾತ್ರ ಮಾಲಿನ್ಯ ಸೃಷ್ಟಿ ಮಾಡುತ್ತವೆ ಎಂಬುದು ಇತ್ತೀಚೆಗೆ ಐಐಟಿ ಕಾನ್ಪುರ್ ನಡೆಸಿದ ಅಧ್ಯಯನವೊಂದರಿಂದ ಬಹಿರಂಗವಾಗಿದೆ. ಉಳಿದ ವಾಹನಗಳು ಪ್ರತಿಶತ 95ರಷ್ಟು ಮಾಲಿನ್ಯವನ್ನು ಸೃಷ್ಟಿಸುತ್ತಿವೆ. ಆದರೆ ಆಪ್ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .