Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಯ ಕನಸು ನುಚ್ಚುನೂರಾಗಿಸಿದ ಮಧ್ಯಪ್ರದೇಶ ಸಿಎಂ

ಪ್ರಧಾನಿ ಮೋದಿಯ ಕನಸು ನುಚ್ಚುನೂರಾಗಿಸಿದ ಮಧ್ಯಪ್ರದೇಶ ಸಿಎಂ
ಭೋಪಾಲ್ , ಮಂಗಳವಾರ, 24 ಅಕ್ಟೋಬರ್ 2017 (20:23 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕನಸನ್ನು ಬಿಜೆಪಿ ಸರಕಾರವೇ ಅಧಿಕಾರದಲ್ಲಿರುವ ಮಧ್ಯಪ್ರದೇಶದಲ್ಲಿ ನುಚ್ಚುನೂರಾಗಿದೆ ಎಂದು ಮೂಲಗಳು ತಿಳಿಸಿವೆ.
ನೋಟು ನಿಷೇಧ ಜಾರಿಗೊಳಿಸಿದ ಬಹುತೇಕ ಒಂದು ವರ್ಷದ ನಂತರ ಮಧ್ಯವರ್ತಿಗಳ ಹಾವಳಿಗಳನ್ನು ತಪ್ಪಿಸಲು ಕೃಷಿ ಕ್ಷೇತ್ರದಲ್ಲಿ ನಗದು ಹಣ ವರ್ಗಾವಣೆಯನ್ನು ನಿಷೇಧಿಸಲಾಗಿತ್ತು. ಇದೀಗ, ವ್ಯಾಪಾರಿಗಳು ಕೃಷಿಕರ ಉತ್ಪನ್ನಗಳಿಗೆ 50 ಸಾವಿರ ರೂಪಾಯಿಗಳವರೆಗೆ ನಗದು ಹಣದ ವಹಿವಾಟು ನಡೆಸಬಹುದು ಎಂದು ಘೋಷಿಸಿ ಮೋದಿ ಕನಸಿಗೆ ಧಕ್ಕೆ ತಂದಿದ್ದಾರೆ.
 
ರೈತರಿಗೆ ಒಂದೇ ದಿನದಲ್ಲಿ ಎಷ್ಟು ಬೇಕಾದರೂ ಹಣವನ್ನು ಪಾವತಿಸಬಹುದು ಯಾವುದೇ ಮಿತಿ ಇಲ್ಲ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾನ್ ತಿಳಿಸಿದ್ದಾರೆ.
 
ರೈತರಿಂದ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ನಮ್ಮದು ರೈತ ಪರ ಸರಕಾರವಾಗಿದ್ದರಿಂದ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು 50 ಸಾವಿರ ರೂಪಾಯಿಗಳವರೆಗೆ ನಗದು ವಹಿವಾಟಿಗೆ ಆದೇಶ ನೀಡಲಾಗಿದೆ. ಉಳಿದ ಹಣವನ್ನು ಚೆಕ್ ಮುಖಾಂತರವಾಗಲಿ ಅಥವಾ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾನ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. 
 
ಕೋಪಗೊಂಡ ರೈತರನ್ನು ಶಮನಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ, ಆದರೆ ವ್ಯಾಪಾರಿಗಳು ಸಿಎಂ ಚೌಹಾನ್  ಆದೇಶವನ್ನು ಧಿಕ್ಕರಿಸಿ, ಸೋಯಾಬೀನ್ ಬೆಳೆದ ರೈತರಿಗೆ ನಗದು ಹಣ ಕೊಡಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸಿಎಂಗೆ ಛೀಮಾರಿ ಹಾಕಿದ ಬಿಜೆಪಿ ಶಾಸಕ