Select Your Language

Notifications

webdunia
webdunia
webdunia
webdunia

ತಾಯಿಗೂ ಮಗಳಿಗೂ ಒಂದೇ ಪ್ರೇಮಿ; ಮುಂದೇನಾಯ್ತು?

Mother
ಅಬೋಹರ್ , ಶುಕ್ರವಾರ, 3 ಜೂನ್ 2016 (11:41 IST)
ತನ್ನ ಪ್ರೇಮಿಯನ್ನೇ ಮಗಳು ಕೂಡ ಪ್ರೀತಿಸಿದಳೆಂಬ ಕಾರಣಕ್ಕೆ ತಾಯಿಯೇ ಮಗಳನ್ನು ಕೊಲೆಗೈದ ಹೇಯ ಘಟನೆ  ಪಂಜಾಬ್‌ನ ಅಬೋಹರ್ ನಗರದಲ್ಲಿ ನಡೆದಿದೆ. ಈ ಮೊದಲು ಇದು ಆತ್ಮಹತ್ಯೆ ಪ್ರಕರಣವೆಂದು ಬಗೆಯಲಾಗಿತ್ತು. ಆದರೆ ತನಿಖೆಯ ಬಳಿಕ ತನ್ನ ಫೇಸ್‌ಬುಕ್ ಪ್ರೇಮಿ ಜತೆ ಸೇರಿ ತಾಯಿಯೇ ಮಗಳನ್ನು ಕೊಂದಿದ್ದಾಳೆ ಎಂಬ ಘೋರ ಸತ್ಯ ಬಯಲಾಗಿದೆ.
ಹದಿಹರೆಯದ ಯುವತಿ ದೀಕ್ಷಾಳನ್ನು ಕೊಂದ ಆರೋಪದ ಮೇಲೆ ಆಕೆಯ ತಾಯಿ ಮಂಜು ಮತ್ತು ಪ್ರೇಮಿ ವಿಜಯ್ ಕುಮಾರ್ ಅಲಿಯಾಸ್ ಸೋನುವನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ನರೇಂದ್ರ ಪಾಲ್ ಸಿಂಗ್ ತಿಳಿಸಿದ್ದಾರೆ. 
 
ಮೇ 24 ರಂದು ಆರೋಪಿ ಮಂಜು ತನ್ನ ಮಗಳು ದೀಕ್ಷಾ  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಳು. ಮಾಹಿತಿ ಸಿಕ್ಕಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಶವ ಫ್ಯಾನ್‌ಗೆ ನೇತಾಡುತ್ತಿದುದು ಕಂಡು ಬಂದಿತ್ತು. 
 
ತನ್ನ ಗಂಡನ ಸಾವಿನ ಬಳಿಕ ಆಸ್ತಿಯನ್ನು ನೀಡಲು ಸಂಬಂಧಿಕರು ನಿರಾಕರಿಸಿದರು. ಈ ಕಾರಣಕ್ಕೆ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ಆರೋಪಿ ತಾಯಿ ಹೇಳಿದ್ದಳು. ಆಕೆಯ ಹೇಳಿಕೆಯನ್ನು ಆಧರಿಸಿ ಪೊಲೀಸರು ಮೃತಳ ತಂದೆಯ ಪೋಷಕರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆದರೆ ದೀಕ್ಷಾ ತನ್ನ ಕೈ ಮೇಲೆ ಬರೆದುಕೊಂಡಿದ್ದ ವಿಜಯ್ ಎಂಬ ಹೆಸರು ಪ್ರಕರಣದ ಸತ್ಯವನ್ನು ಹೊರಕ್ಕೆ ತರಲು ಪೊಲೀಸರಿಗೆ ಸಹಾಯಕವಾಯಿತು. 
 
ಅಕ್ಟೋಬರ್ 2015ರಲ್ಲಿ ಫೇಸ್‌ಬುಕ್ ಮೂಲಕ ಮಂಜು ಮತ್ತೆ ಸೌಧಿ ನಿವಾಸಿ ವಿಜಯ್‌ಗೆ ಪರಿಚಯವಾಗಿತ್ತು. ಅವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿದ ಮೇಲೆ ವಿಜಯ್ ಭಾರತಕ್ಕೆ ಹಿಂತಿರುಗಿ ಪ್ರೇಮಿ ಮನೆಯಲ್ಲಿ ವಾಸ ಮಾಡತೊಡಗಿದ. 
 
ಕಳೆದ ಜನೇವರಿ ತಿಂಗಳಲ್ಲಿ ಅವರು ಲಿವಿಂಗ್ ಟುಗೆದರ್ ಜೀವನವನ್ನು ಆರಂಭಿಸಿದರು. ಅಷ್ಟಕ್ಕೆ ವಿಜಯ್ ಸುಮ್ಮನಾಗಲಿಲ್ಲ. ಮಂಜು ಮಗಳು ದೀಕ್ಷಾ(17) ಜತೆಗೂ ಪ್ರೀತಿ-ಪ್ರೇಮವನ್ನು ಪ್ರಾರಂಭಿಸಿಕೊಂಡ. ಬಾಲಕಿಗೆ ಆತನೊಂದಿಗಿನ ತನ್ನ ತಾಯಿಯ ಸಂಬಂಧದ ಬಗ್ಗೆ ಅರಿವಿರಲಿಲ್ಲ. ಒಂದು ದಿನ ಅವರಿಬ್ಬರನ್ನು ಒಂದೇ ಹಾಸಿಗೆಯಲ್ಲಿ ನೋಡಿದಾಗ ಆಕೆ ಶಾಕ್ ಆಗಿದ್ದಾಳೆ. ಆತನನ್ನು ಮದುವೆಯಾಗುವ ವಿಷಯಕ್ಕೆ ತಾಯಿ ಮಗಳ ನಡುವೆ ಜಗಳವಾಗಿದೆ. ವಿಜಯ್ ಮೇಲಿನ ಪ್ರೀತಿಯಿಂದ ದೀಕ್ಷಾ ಆತನ ಹೆಸರನ್ನು ತನ್ನ ಕೈ ಮೇಲೆ ಬರೆಸಿಕೊಂಡಿದ್ದಳು. ಅದನ್ನು ನೋಡಿ ಕೆಂಡಾಮಂಡಲವಾದ ತಾಯಿ ಉಸಿರುಗಟ್ಟಿಸಿ ಮಗಳನ್ನೇ ಕೊಲೆಗೈದಿದ್ದಾಳೆ. 
 
ಬಳಿಕ ಮಂಜು ಮತ್ತು ವಿಜಯ್, ದೀಕ್ಷಾ ಬರೆದ ಹಾಗೆ ಡೆತ್ ನೋಟ್ ಬರೆದಿಟ್ಟಿದ್ದಾರೆ.
 
ಕೇವಲ ದೈಹಿಕ ಚಪಲಕ್ಕಾಗಿ ಹೆತ್ತ ತಾಯಿಯೇ ತನ್ನ ಕರುಳ ಕುಡಿಯ ಉಸಿರುಗಟ್ಟಿಸಿದ್ದು ಮಾತ್ರ ನಿಜಕ್ಕೂ ಖಂಡನೀಯ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸೆನ್ಸೆಕ್ಸ್: ಭರ್ಜರಿ ಚೇತರಿಕೆ ಕಂಡ ಶೇರುಪೇಟೆ ಸೂಚ್ಯಂಕ