Publish Date: Tue, 20 Apr 2021 (07:14 IST)
Updated Date: Tue, 20 Apr 2021 (07:16 IST)
ಪಂಜಾಬ್ : ತಾನು ಮನೆಯಲ್ಲಿ ಇಲ್ಲದಿದ್ದಾಗ ತನ್ನ 14 ವರ್ಷದ ಮಗಳ ಮೇಲೆ ತನ್ನ 27 ವರ್ಷದ ಗೆಳೆಯ ಮಾನಭಂಗ ಎಸಗಿದ್ದಾನೆ ಎಂದು ಮಹಿಳೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ.
ಮಹಿಳೆಗೆ ಮದುವೆಯಾಗಿದ್ದು ಆಕೆಗೆ ಒಬ್ಬಳು ಮಗಳಿದ್ದಾಳೆ. ಬಳಿಕ ಅವಳು ಪತಿಯಿಂದ ದೂರವಾಗಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಳು. ಅಲ್ಲಿ ಅವಳಿಗೆ ವ್ಯಕ್ತಿಯೊಬ್ಬ ಪರಿಚಯವಾಗಿ ಆತನ ಜೊತೆ ಸಂಬಂಧ ಬೆಳೆಸಿದ್ದಾಳೆ. ಆದರೆ ಆತ ಆಕೆ ಮನೆಯಲ್ಲಿ ಇಲ್ಲದಿದ್ದಾಗ ಅವಳ ಮಗಳ ಮೇಲೆ ಮಾನಭಂಗ ಎಸಗುತ್ತಿದ್ದ. ಈ ಬಗ್ಗೆ ಆಕೆ ಕೇಳಿದರೆ ಅವಳನ್ನು ಕ್ರೂರವಾಗಿ ಥಳಿಸುತ್ತಿದ್ದ.
ಈ ಹಿನ್ನಲೆಯಲ್ಲಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.