Select Your Language

Notifications

webdunia
webdunia
webdunia
Thursday, 10 April 2025
webdunia

ಚಿಕಿತ್ಸೆಗೆಂದು ಬಂದಿದ್ದ ತಾಯಿ, ಮಗಳು ಶವವಾಗಿ ಪತ್ತೆ!

ಚಿಕಿತ್ಸೆ
ಗಾಂಧಿನಗರ , ಗುರುವಾರ, 22 ಡಿಸೆಂಬರ್ 2022 (09:37 IST)
ಗಾಂಧಿನಗರ : ಆಪರೇಷನ್ ಥಿಯೇಟರ್ನ ಕಬೋರ್ಡ್ನಲ್ಲಿ ಮಗಳ ಹಾಗೂ ಹಾಸಿಗೆಯ ಕೆಳಗೆ ತಾಯಿಯ ಶವ ಪತ್ತೆಯಾದ ಘಟನೆ ಅಹಮದಾಬಾದ್ನ ಭೂಬಾಯ್ ಪಾರ್ಕ್ ಬಳಿ ಇರುವ ಆಸ್ಪತ್ರೆಯಲ್ಲಿ ನಡೆದಿದೆ.

ಮೃತರನ್ನು ತಾಯಿಯನ್ನು ಚಂಪಾ ಮತ್ತು ಮಗಳನ್ನು ಭಾರತಿ ವಾಲಾ (30) ಎಂದು ಗುರುತಿಸಲಾಗಿದೆ. ಆಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ ದುರ್ವಾಸನೆ ಬರುತ್ತಿತ್ತು.

ಇದನ್ನು ತಾಳಲಾರದ ಅಲ್ಲಿನ ಸಿಬ್ಬಂದಿ ಅಲ್ಲಿದ್ದ ಕಬೋರ್ಡ್ನ್ನು ತೆರೆದಿದ್ದಾರೆ. ಆ ವೇಳೆ ಭಾರತಿಯ ಮೃತದೇಹ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಈ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೇಕಾರರಿಗೆ ಗುಡ್ ನ್ಯೂಸ್ ನೀಡಿದ ಸಿಎಂ?