Select Your Language

Notifications

webdunia
webdunia
webdunia
शुक्रवार, 27 दिसंबर 2024
webdunia

ಹೆತ್ತ ತಾಯಿಗೆ ಲೈಂಗಿಕ ಕಿರುಕುಳ ನೀಡಿದ ಪುತ್ರನಿಗೆ ಕಠಿಣ ಶಿಕ್ಷೆ

ಹೆತ್ತ ತಾಯಿಗೆ ಲೈಂಗಿಕ ಕಿರುಕುಳ ನೀಡಿದ ಪುತ್ರನಿಗೆ ಕಠಿಣ ಶಿಕ್ಷೆ
ನವದೆಹಲಿ , ಶನಿವಾರ, 10 ಜೂನ್ 2017 (16:29 IST)
ಹೆತ್ತ ತಾಯಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 48 ವರ್ಷ ವಯಸ್ಸಿನ ಆರೋಪಿಗೆ ನ್ಯಾಯಾಲಯ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.   
 
ತನ್ನ ಹೆತ್ತ ತಾಯಿಯ ಮೇಲೆ ಹಲ್ಲೆ ಮಾಡುತ್ತಿರುವ ವ್ಯಕ್ತಿಯು ಕೃತ್ಯ ಸಮಾಜದಲ್ಲಿ ಅತ್ಯಂತ ನೈತಿಕವಾಗಿ ಮತ್ತು ದೈಹಿಕವಾಗಿ ಖಂಡಿಸುವ ಅಪರಾಧವಾಗಿದೆ ಎಂದು ದೆಹಲಿ ನ್ಯಾಯಾಲಯ ತಿಳಿಸಿದೆ. ಆರೋಪಿಗೆ ಕರುಣೆಗೆ ಅರ್ಹನಾಗಿಲ್ಲ ಎಂದು ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಿದೆ. 
 
ಹೆತ್ತ ತಾಯಿಗೆ ಕಿರುಕುಳ ನೀಡಿ ಆಕೆ ನೋವನುಭವಿಸುವಂತೆ ಮಾಡಿದ ಆರೋಪಿಯ ಅಪರಾಧಕ್ಕೆ ಕಠಿಣೆ ಶಿಕ್ಷೆಯಾಗಬೇಕಾಗಿದೆ. ತಾಯಿಯ ಹೆಸರು ಬಹಿರಂಗವಾಗದಿರಲು ಆರೋಪಿಯ ಹೆಸರನ್ನು ತಡೆಹಿಡಿಯಲಾಗಿದೆ ಎಂದು ಕೋರ್ಟ್ ತಿಳಿಸಿದೆ.
 
ಪೊಲೀಸರಿಗೆ ದೂರು ನೀಡಿದ ಆರೋಪಿಯ ತಾಯಿ, ತಾನೊಬ್ಬ ವಿಧವೆಯಾಗಿದ್ದು ತನ್ನ ಹಿರಿಯ ಮಗ ನಿರಂತರವಾಗಿ ಮದ್ಯ ಸೇವಿಸಿ ಕಿರುಕುಳ ನೀಡುವುದಲ್ಲದೇ ಹಲ್ಲೆ ಮಾಡುತ್ತಾನೆ.  ಕೆಲ ದಿನಗಳ ಹಿಂದೆ ನನ್ನನ್ನು ಕೋಣೆಯೊಳಗೆ ಎಳೆದು ಬಾಗಿಲು ಹಾಕಿ, ನನ್ನನ್ನು ನಗ್ನಗೊಳಿಸಿ ಕಿರುಕುಳ ನೀಡಿದ್ದಾನೆ. ರಕ್ತಸ್ರಾವದ ತನಕ ನನ್ನನ್ನು ಬಿಡಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
 
ತಾಯಿ ಹಲವಾರು ದಿನಗಳವರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆಕೆಯ ಗಾಯಗಳಿಗೆ ತಕ್ಷಣದ ಶಸ್ತ್ರಚಿಕಿತ್ಸೆ ನೀಡದಿದ್ದಲ್ಲಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ಕೃತ್ಯ ಎಸಗಿದ ನಂತರ ಆರೋಪಿ ಪರಾರಿಯಾಗಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಕಾನೂನು ಪ್ರಕಾರ, ಆರೋಪಿ ಕುಟುಂಬದ ಸ್ತ್ರೀಯರಿಗೆ ಕೂಡಾ ಕಿರುಕುಳ ನೀಡುತ್ತಿದ್ದ. ಸಹೋದರಿಯರನ್ನು ಕೂಡಾ ನಗ್ನಗೊಳಿಸಿ ಹಲ್ಲೆ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಆರೋಪಿಯನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಂಗದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನಾಲ್ಕು ವರ್ಷಗಳ ಕಠಿಣ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಆಕ್ರಮಿತ ಕಾಶ್ಮಿರ ಹಿಂಪಡೆಯುವ ಸಮಯ ಬಂದಿದೆ: ಬಾಬಾ ರಾಮಂದೇವ್