Select Your Language

Notifications

webdunia
webdunia
webdunia
webdunia

ಕೇರಳ ಪ್ರವೇಶಿಸಿದ ನೈಋತ್ಯ ಮುಂಗಾರು: ಜೂನ್ 3ರಿಂದ ರಾಜ್ಯದಲ್ಲಿ ಮಳೆ

ಕೇರಳ ಪ್ರವೇಶಿಸಿದ ನೈಋತ್ಯ ಮುಂಗಾರು: ಜೂನ್ 3ರಿಂದ ರಾಜ್ಯದಲ್ಲಿ ಮಳೆ
ತಿರುವನಂತಪುರಂ , ಬುಧವಾರ, 31 ಮೇ 2017 (11:18 IST)
ತಿರುವನಂತಪುರಂ:ವಾಡಿಕೆಗಿಂತ ಎರಡು ದಿನ ಮೊದಲೇ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿದ್ದು, ಕೇರಳದಾದ್ಯಂತ ಭಾರೀ ಮಳೆಯಾಗಿತ್ತಿದೆ. ಈ ನಿಟ್ಟಿನಲ್ಲಿ ಜೂನ್3ರಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
 
ಕೇರಳ ಮಾತ್ರವಲ್ಲದೇ ತಮಿಳುನಾಡಿನ ದಕ್ಷಿಣ ಮತ್ತು ಪಶ್ಚಿಮ ಭಾಗಗಳು, ಈಶಾನ್ಯ ರಾಜ್ಯಗಳಾದ  ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಗಳಲ್ಲೂ ನೈರುತ್ಯ ಮುಂಗಾರು ಮಳೆ ಸುರಿಸಿದೆ. ಬಾಂಗ್ಲಾದೇಶ ಕರಾವಳಿಯನ್ನು ಮಂಗಳವಾರ ಹಾದು ಹೋದ  ‘ಮೊರಾ’ ಚಂಡಮಾರುತ, ಈಶಾನ್ಯ ಭಾಗಗಳಲ್ಲಿ ನೈರುತ್ಯ ಮುಂಗಾರಿನ ಪ್ರವೇಶಕ್ಕೆ ಒತ್ತಾಸೆ ನೀಡಿದೆ ಎಂದು ಇಲಾಖೆ ಹೇಳಿದೆ.
 
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಕಳೆದ ಕೆಲ ವರ್ಷಗಳಿಂದ ಬರದಿಂದ ಬಸವಳಿದಿರುವ ರಾಜ್ಯಕ್ಕೆ ಮಳೆಯು ನವ ಉತ್ಸಾಹ ತುಂಬಲಿದೆ ಎಂದು ನಿರೀಕ್ಷಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಗೋ ಹತ್ಯೆ ನಿಷೇಧ ಕಾಯಿದೆ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ