Webdunia - Bharat's app for daily news and videos

Install App

ಸಂಸತ್ತಿಗೆ ಬಂದ ವಿಐಪಿ ವಾನರ

Webdunia
ಶುಕ್ರವಾರ, 29 ಜುಲೈ 2016 (12:53 IST)
ಸಂಸತ್ತಿನ ಸೆಂಟ್ರಲ್ ಹಾಲ್‌ ಬಳಿಯ ಗ್ರಂಥಾಲಯಕ್ಕೆ ನಿನ್ನೆ ವಾನರನೊಬ್ಬ ಆಗಮಿಸಿ ಅಲ್ಲಿನ ಭದ್ರತಾ ಸಿಬ್ಬಂದಿಗೆ ಕೆಲಕಾಲ ತಲೆಬಿಸಿಯನ್ನು ತಂದಿಟ್ಟುಬಿಟ್ಟ. ಸಂಸದರಿಗೆ ಮತ್ತು ಪತ್ರಕರ್ತರಿಗಾಗಿ ಮೀಸಲಾಗಿಟ್ಟಿರುವ ರೀಡಿಂಗ್ ರೂಮ್‌‌ಗೆ ನುಗ್ಗಿದ ಆತ ಅಲ್ಲಿ ಕೆಲ ಹೊತ್ತು ಓಡಾಡಿದ.

ಮಂಗ ಒಳಗೆ ಪ್ರವೇಶಿಸುತ್ತಿದ್ದಂತೆ ಭದ್ರತಾ ಸಿಬ್ಬಂದಿ ಸಂಸದರು, ಸಚಿವರು ಮತ್ತು ಪತ್ರಕರ್ತರು ಸದಾ ಬಹುಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವ ಉಪ ಸೆಂಟ್ರಲ್ ಹಾಲ್ ದ್ವಾರವನ್ನು ಮುಚ್ಚಿದರು.

ಗ್ರಂಥಾಲಯವನ್ನೊಮ್ಮೆ ಸುತ್ತು ಹಾಕಿದ ಕಪಿ, ನಂತರ ಅಲ್ಲಿದ್ದ ಮೇಜಿನ ಮೇಲೆ ಕುಳಿತುಕೊಂಡಿತು.ಟೇಬಲ್, ಕುರ್ಚಿಯ ಮೇಲೆಲ್ಲ ಜಿಗಿದಾಡಿದ ಮಂಗ, ಗ್ಯಾಲರಿಯಲ್ಲಿದ್ದ ವಿದ್ಯುತ್ ತಂತಿ ಹತ್ತಿ ಇಳಿದು ಆತಂಕವನ್ನು ಸೃಷ್ಟಿಸಿತು. ಹೊರ ಹೋಗುವ ದಾರಿಯನ್ನು ಪತ್ತೆ ಹಚ್ಚಲಾಗದೆ 30 ನಿಮಿಷಗಳ ಕಾಲ ಗ್ರಂಥಾಲಯದಲ್ಲಿಯೇ ಸುತ್ತಾಡಿದ ಯುವ ಮಂಗ, ಮುಖ್ಯದ್ವಾರದ ಮೂಲಕ ಹೊರಬಂದು ಹಸಿರು ಹಾಸಿನ ಕಾರಿಡಾರ್ ಮೂಲಕ ವಿಐಪಿ‌ಗಳಿಗಾಗಿರುವ ಪ್ರಧಾನ ಗೇಟ್‌ನಿಂದ ಹೊರಬಿತ್ತು.

ಮಂಗ ಹೊರ ಹೋಗುತ್ತಿದ್ದಂತೆ ಕೊನೆಗೂ ಗ್ರಂಥಾಲಯದ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.

ಸಿಪಿಎಂ ಸದಸ್ಯ ಎಂ.ಬಿ. ರಾಜೇಶ್ ಮತ್ತು ಆರ್‌ಎಸ್‌ಪಿ ಸದಸ್ಯ ಎನ್.ಕೆ. ಪ್ರೇಮಚಂದ್ರನ್ ಅವರು ಸಹ ಆ ಸಂದರ್ಭದಲ್ಲಿ ಗ್ರಂಥಾಲಯದಲ್ಲಿದ್ದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ಉಗ್ರರನ್ನು ಕೊಂದಿದ್ದಕ್ಕೆ ಪಾಕಿಸ್ತಾನಕ್ಕೆ ಸಿಟ್ಟು, ಭಾರತೀಯ ನಾಗರಿಕರ ಮೇಲೆ ದಾಳಿ, 10 ಮಂದಿ ಸಾವು

Operation Sindoor: ಪಾಕಿಸ್ತಾನ ದಾಳಿಗೆ ಬಂದರೆ ಬರಲಿ, ನಾವೂ ರೆಡಿ ಎಂದ ಭಾರತೀಯ ಸೇನೆ

Operation Sindoor: ಆಪರೇಷನ್ ಸಿಂದೂರ್ ಗೆ ಬಲಿಯಾಯ್ತು ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ನ ಕುಟುಂಬ

Gold Price today: ಯುದ್ಧದ ಕಾರ್ಮೋಡದ ನಡುವೆ ಚಿನ್ನದ ದರ ಏರಿಕೆಯ ಶಾಕ್

Operation Sindoor: ಆಪರೇಷನ್ ಸಿಂದೂರ ಬಗ್ಗೆ ಮಹಿಳಾ ಅಧಿಕಾರಿಗಳನ್ನೇ ಕೂರಿಸಿ ಮಾಹಿತಿ ನೀಡಿದ ಸೇನೆ

ಮುಂದಿನ ಸುದ್ದಿ
Show comments