Webdunia - Bharat's app for daily news and videos

Install App

ಕಾರು ಕೊಡಲು ನಿರಾಕರಿಸಿದ್ದರಿಂದ ಪತ್ನಿಗೆ ತಲಾಕ್ ನೀಡಿದ ಪತಿ ಮಹಾಶಯ

Webdunia
ಶುಕ್ರವಾರ, 29 ಜುಲೈ 2016 (12:40 IST)
ವಿವಾಹದ ಸಂಭ್ರಮದಲ್ಲಿದ್ದ ಯುವತಿಯ ಸಂತೋಷ ಕೆಲವೇ ಗಂಟೆಗಳಲ್ಲಿ ದುಖಃದ ಕಡಲಲ್ಲಿ ಮುಳುಗಿಸಿತು. ಪತ್ನಿಯ ಪೋಷಕರು ಕಾರು ಕೊಡಲು ನಿರಾಕರಿಸಿದ್ದಾರೆ ಎನ್ನುವ ಕೋಪದಿಂದಾಗಿ ಪತಿ, ತನ್ನ ಪತ್ನಿಗೆ ಮೂರು ಬಾರಿ ತಲಾಕ್ ಘೋಷಿಸಿದ ಘಟನೆ ವರದಿಯಾಗಿದೆ. 
 
ಬಾಗಪತ್‌ನ ದೋಹಾ ಗ್ರಾಮದಲ್ಲಿ ಮೊಹಸಿನಾ ಎನ್ನುವ ವಿವಾಹ ಮೊಹಮ್ಮದ್ ಆರೀಫ್ ಎಂಬಾತನೊಂದಿಗೆ ನಡೆದಿತ್ತು. ವರನಿಗೆ ನೀಡಬೇಕಾದ ಎಲ್ಲಾ ವಸ್ತುಗಳನ್ನು ನೀಡಲಾಗಿತ್ತು. ಆದರೆ, ವರದಕ್ಷಿಣೆ ರೂಪದಲ್ಲಿ ಕಾರು ನೀಡಲಿಲ್ಲ ಎನ್ನುವ ಕಾರಣಕ್ಕೆ ವರ ಕೋಪಗೊಂಡಿದ್ದನು ಎನ್ನಲಾಗಿದೆ.
 
ವಿವಾಹವಾದ ಕೆಲವೇ ಗಂಟೆಗಳಲ್ಲಿ ಪತಿ ಮೊಹಮ್ಮದ್ ಆರೀಫ್ ತಲಾಕ್ ನೀಡಿದ್ದರಿಂದ ಕಂಗಾಲಾದ ಮೊಹಸಿನಾ, ತನ್ನ ತವರು ಮನಗೆ ವಾಪಸಾಗಿದ್ದಳು. ಉಭಯ ಕುಟುಂಬದವರು ಚರ್ಚಿಸಿದರೂ ಪರಿಹಾರ ದೊರೆಯದಿದ್ದಾಗ ಪಂಚಾಯತಿಯ ಮೊರೆಹೋಗಿದ್ದಾರೆ.
 
ಮೊಹಮ್ಮದ್ ಆರೀಫ್ ತನ್ನ ಬೇಡಿಕೆ ಈಡೇರಿಸಲೇಬೇಕು ಎಂದು ಹಟ ಹಿಡಿದಿದ್ದಾನೆ. ನಂತರ ಹಿರಿಯರ ಒತ್ತಡಕ್ಕೆ ಮಣಿದು ಮನೆಗೆ ಬರುವಂತೆ ಪತ್ನಿಯನ್ನು ಕರೆದಿದ್ದಾನೆ. ಆದರೆ, ಮೊಹಸೀನಾ ಪತಿಯ ಮನೆಗೆ ತೆರಳಲು ನಿರಾಕರಿಸಿದ್ದಾಳೆ.
 
ಮೊಹಮ್ಮದ್ ಆರೀಫ್‌ನಂತಹ ಕಟುಕನ ಕೈಯಲ್ಲಿ ಬಾಳುವುದಕ್ಕಿಂತ ಆತನಿಂದ ದೂರವಾಗಿರುವ ಮೊಹಸಿನ್ ನಿರ್ಧಾರ ಸೂಕ್ತವಾಗಿದೆ ಎಂದು ಪಂಚಾಯಿತಿ ಅಭಿಪ್ರಾಯಪಟ್ಟಿದೆ.
 
ಮೊಹಮ್ಮದ್ ಆರೀಫ್, ಮಹಿಳೆಯ ಕುಟುಂಬಕ್ಕೆ 2.25 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಪಾವತಿಸಬೇಕು ಮತ್ತು ಮೂರು ವರ್ಷಗಳ ಕಾಲ ವಿವಾಹವಾಗದಂತೆ ನಿಷೇಧ ಹೇರಿ ಪಂಚಾಯತಿ ತೀರ್ಪು ನೀಡಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ಕುಟುಂಬದ ಹತ್ತು ಮಂದಿಗೆ ಅಲ್ಲಾನ ಆಶೀರ್ವಾದ ಸಿಕ್ಕಿದೆ ಎಂದು ಕಣ್ಣೀರಿಟ್ಟ ಉಗ್ರ ಮಸೂದ್

Operation Sindoor: ಸಿಂಧೂರ ಕಸಿದವನು ತನ್ನ ಕುಟುಂಬ ಕಳೆದುಕೊಂಡಿದ್ದಾನೆ ಎಂದ ಯೋಗಿ ಆದಿತ್ಯನಾಥ್‌

Operation Sindoor: ಪಾಕ್‌ ಸೇನೆ ಅಪ್ರಚೋದಿತ ಗುಂಡಿನ ದಾಳಿ: 15 ಮಂದಿ ನಾಗಕರಿಕರು ಸಾವು

Mock Drill: ಬೆಂಗಳೂರು ಪೂರ್ತಿ ಲೈಟ್ಸ್ ಆಫ್

Operation Sindoor: ಸೇನೆಗೆ ಭಗವಂತ ಶಕ್ತಿ ತುಂಬಲು ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಮುಂದಿನ ಸುದ್ದಿ
Show comments