ರಾಮಲಲ್ಲಾನ ನೋಡಲು ಅಯೋಧ್ಯೆ ರಾಮಮಂದಿರಕ್ಕೆ ಬಂದ ಹನುಮ

Krishnaveni K
ಬುಧವಾರ, 24 ಜನವರಿ 2024 (11:05 IST)
ಅಯೋಧ್ಯೆ: ರಾಮ ಎಲ್ಲಿ ಇರುತ್ತಾನೋ ಅಲ್ಲಿ ಹನುಮ ಇರುತ್ತಾನೆ ಎಂಬ ಮಾತು ಅಕ್ಷರಶಃ ನಿಜವಾಗಿದೆ. ಮೊನ್ನೆಯಷ್ಟೇ ಲೋಕಾರ್ಪಣೆಗೊಂಡಿರುವ ಅಯೋಧ್ಯೆಯ ರಾಮಮಂದಿರಕ್ಕೆ ರಾಮಲಲ್ಲಾನನ್ನು ನೋಡಲು ಹನುಮ ಬಂದಿದ್ದಾನೆ!

ರಾಮಮಂದಿರದ ಒಳಗೆ ಕೋತಿಯೊಂದು ಬಂದಿದ್ದು, ಯಾರಿಗೂ ತೊಂದರೆ ಮಾಡದೇ ಮಂದಿರವಿಡೀ ಓಡಾಡಿ ಹೊರಗೆ ಹೋಗಿದೆ. ಈ ವಿಚಾರವನ್ನು ಖುದ್ದು ರಾಮ ಜನ್ಮಭೂಮಿ ಟ್ರಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ.

ನಿನ್ನೆ ಸಂಜೆ 5.50 ರ ಸುಮಾರಿಗೆ ದಕ್ಷಿಣ ದ್ವಾರದ ಮೂಲಕ ದೇಗುಲ ಪ್ರವೇಶಿಸಿದ್ದ ಒಂದು ಕೋತಿ ಗರ್ಭಗುಡಿ ಪ್ರವೇಶಿಸಿ ಉತ್ಸವ ಮೂರ್ತಿಯ ಬಳಿ ತಲುಪಿದೆ.  ಕೋತಿ ಉತ್ಸವ ಮೂರ್ತಿಗೆ ತೊಂದರೆ ಮಾಡಬಹುದು ಎಂದು ಭಾವಿಸಿ ಭದ್ರತಾ ಸಿಬ್ಬಂದಿಗಳು ಕೋತಿಯತ್ತ ಧಾವಿಸಿದ್ದಾರೆ.

ಆದರೆ ಸಿಬ್ಬಂದಿಯನ್ನು ನೋಡಿದ ಕೋತಿ ಯಾವುದೇ ತೊಂದರೆ ಮಾಡದೇ ಉತ್ತರ ದ್ವಾರದ ಕಡೆಗೆ ಓಡಿದೆ. ಅಲ್ಲಿ ಗೇಟ್ ಮುಚ್ಚಿದ್ದರಿಂದ ಪೂರ್ವ ದ್ವಾರದ ಕಡೆಗೆ ತೆರಳಿ ಅಲ್ಲಿಂದ ಹೊರಹೋಗಿದೆ ಎಂದು ಟ್ರಸ್ಟ್ ತಿಳಿಸಿದೆ. ನಿಜಕ್ಕೂ ರಾಮನನ್ನು ನೋಡಲು ಬಂಟ ಹನುಮನೇ ಈ ರೀತಿ ಬಂದಿರಬಹುದು ಎಂದು ಟ್ರಸ್ಟ್ ಹೇಳಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮಿತ್ ಶಾ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಮಮತಾ ಬ್ಯಾನರ್ಜಿ

ಮಧ್ಯಪ್ರಾಚ್ಯ ಸಂಘರ್ಷ: ಯಾವುದೇ ಇಂಧನ ಕೊರತೆಯಿಲ್ಲ

ಸುಧಾಕರ್ ಆರೋಗ್ಯದ ಬಗ್ಗೆ ಬಿಗ್‌ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ

ಮದುವೆ ನೆಪದಲ್ಲಿ ಯುವತಿಗೆ ದೋಖಾ: ಮಗು, ಸಂತ್ರಸ್ತೆ ಪಾಲನೆಗೆ ಕೃಷ್ಣ ಜೆ ರಾವ್‌ ಎಷ್ಟು ಹಣ ನೀಡಬೇಕು ಗೊತ್ತಾ

ಉಡುಪಿ: ನಾಪತ್ತೆಯಾಗಿದ್ದ ಉಪನ್ಯಾಸಕನ ಶವ ಬಾವಿಯಲ್ಲಿ ಪತ್ತೆ, ಆತ್ಮಹತ್ಯೆ ಶಂಕೆ

ಮುಂದಿನ ಸುದ್ದಿ
Show comments