Select Your Language

Notifications

webdunia
webdunia
webdunia
webdunia

ಮೋನಿಕಾ ಮರ್ಡರ್: ಹತ್ಯೆಗೆ ಬಳಸಿದ್ದ ಚಾಕುವನ್ನು ಅಲ್ಲೇ ಅಡಗಿಸಿಟ್ಟಿದ್ದ ಹಂತಕ

ಮೋನಿಕಾ ಮರ್ಡರ್: ಹತ್ಯೆಗೆ ಬಳಸಿದ್ದ ಚಾಕುವನ್ನು ಅಲ್ಲೇ ಅಡಗಿಸಿಟ್ಟಿದ್ದ ಹಂತಕ
ಪಣಜಿ , ಶನಿವಾರ, 15 ಅಕ್ಟೋಬರ್ 2016 (13:04 IST)
ದೇಶಾದ್ಯಂತ ತೀವ್ರ ಸಂಚಲವನ್ನು ಮೂಡಿಸಿದ್ದ ಸುಗಂಧದ್ರವ್ಯ ತಜ್ಞೆ ಮೋನಿಕಾ ಘುರ್ಢೆ ಹತ್ಯೆಗೈಯ್ಯಲು ಆರೋಪಿ ಬಳಸಿದ್ದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 
ಹತ್ಯೆಗೈದ ಬಳಿಕ ಚಾಕುವನ್ನು ಆಕೆ ವಾಸವಾಗಿದ್ದ ಫ್ಲ್ಯಾಟ್‌ನ ಅಡುಗೆ ಮನೆಯಲ್ಲಿ ಬಚ್ಚಿಡಲಾಗಿತ್ತು. ಅದನ್ನು ಜಪ್ತಿ  ಮಾಡಲಾಗಿದೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ. 
 
ಖ್ಯಾತ ಸುಗಂಧದ್ರವ್ಯ ತಜ್ಞೆ ಮೋನಿಕಾ ಘುರ್ಡೆ ಅಕ್ಟೋಬರ್ 6 ರಂದು ಗೋವಾದ ಸಂಗೊಲ್ಡಾದಲ್ಲಿರುವ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ದೇಶಾದ್ಯಂತ ಸಂಚಲನ ಮೂಡಿಸಿದ್ದ ಈ ಪ್ರಕರಣದ ಆರೋಪಿಯನ್ನು ಘಟನೆ ನಡೆದ ಮೂರು ದಿನಗಳ ಬಳಿಕ ಗೋವಾ, ಮಂಗಳೂರು, ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಬಂಧಿಸಲಾಗಿತ್ತು. ಮೋನಿಕಾ ಘುರ್ಡೆ ಹತ್ಯೆ ಬಳಿಕ ಆರೋಪಿ ಅವರ 2 ಎಟಿಎಂ ಕಾರ್ಡ್‌ ಮತ್ತು ಮೊಬೈಲ್ ಕದ್ದಿದ್ದ ಮತ್ತು ಘಟನೆ ನಡೆದ ಒಂದು ಗಂಟೆಯೊಳಗೆ ಅದೇ ಎಟಿಎಂ ಬಳಸಿ ಆರೋಪಿ ಹಣ ತೆಗೆಯುತ್ತಿರುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿದ್ದವು. ಇದನ್ನು ಆಧರಿಸಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. 
 
ಬಂಧಿತ ಆರೋಪಿ ಪಂಜಾಬ್‌ನ ಬತಿಂದಾ ಮೂಲದ ಆರೋಪಿ ರಾಜ್ ಕುಮಾರ್ ಸಿಂಗ್(21) ಅಪಾರ್ಟಮೆಂಟ್‌ನಲ್ಲಿ ಮೋನಿಕಾ ವಾಸವಾಗಿದ್ದ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ .
 
ಛತ್ರಿ ವಿಚಾರಕ್ಕೆ ಮೋನಿಕಾ ಮತ್ತು ಸಿಂಗ್‌ಗೆ ಜಗಳವಾಗಿತ್ತು. ಈ ಗಲಾಟೆ ಬಳಿಕ ಕೆಲ ಕಳೆದುಕೊಂಡಿದ್ದ ಸಿಂಗ್‌ಗೆ ಬಳಿಕ ಮತ್ತೆಲ್ಲೂ ಕೆಲಸ ಸಿಕ್ಕಿರಲಿಲ್ಲ. ಇದೇ ಸಿಟ್ಟಲ್ಲಿ ಆತ ಮೋನಿಕಾಳನ್ನು ಕೊಲೆಗೈದಿದ್ದ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ಹೊರಬಿದ್ದಿತ್ತು.
 
ರಾಷ್ಟ್ರೀಯ ಸುದ್ದಿಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ ಆರೋಪಿ ಮೋನಿಕಾಗೆ ಮೂರು ಫೋರ್ನ್ ಕ್ಲಿಪ್‌ಗಳನ್ನು ಬಲವಂತವಾಗಿ ತೋರಿಸಿದ್ದೆ ಎಂದು ಸಿಂಗ್ ಗೋವಾ ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾನೆ. 
 
ಇದು ಆಕಸ್ಮಿಕವಾಗಿ ಆದ ಕೊಲೆ ಎಂದು ಆರೋಪಿ ಈ ಮೊದಲು ನೀಡಿದ್ದ. ಆದರೆ ವಿಚಾರಣೆ ಬಳಿಕ ಇದು ಪೂರ್ವ ನಿಯೋಜಿತ ಕೊಲೆ ಎಂದು ಸಾಬೀತಾಗಿತ್ತು. ಕೃತ್ಯದಲ್ಲಿ ಎರಡೆಯ ವ್ಯಕ್ತಿ ಕೈವಾಡವಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಮಠ ಮಂದಿರ ಬಿಡಿ ಶಿಕ್ಷಣದತ್ತ ಗಮನಕೊಡಿ: ಸಚಿವ ಅಂಜನೇಯ ಸಲಹೆ