Select Your Language

Notifications

webdunia
webdunia
webdunia
webdunia

ತಾಯಿ ಭೇಟಿಗೆ ಅಹಮದಾಬಾದ್ ತೆರಳಿದ ಮೋದಿ

ತಾಯಿ ಭೇಟಿಗೆ ಅಹಮದಾಬಾದ್ ತೆರಳಿದ ಮೋದಿ
ಗಾಂಧೀನಗರ , ಗುರುವಾರ, 29 ಡಿಸೆಂಬರ್ 2022 (08:05 IST)
ಗಾಂಧೀನಗರ : ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ಆರೋಗ್ಯ ಕಳೆದ ರಾತ್ರಿ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ತಾಯಿಯ ಭೇಟಿಗೆ ಮೋದಿ ತುರ್ತಾಗಿ ಅಹಮದಾಬಾದ್ ತೆರಳಿದ್ದಾರೆ. ಈ ವರ್ಷ ಜೂನ್ನಲ್ಲಿ 99 ವರ್ಷ ಪೂರೈಸಿರುವ ಹೀರಾಬೆನ್ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆ ಅವರನ್ನು ಹಮದಾಬಾದ್ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರ ಆರೋಗ್ಯ ಇದೀಗ ಸ್ಥಿರವಾಗಿದೆ ಎಂದು ಯುಎನ್ ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್ ತಿಳಿಸಿದೆ. ಉಳಿದಂತೆ ಆಸ್ಪತ್ರೆ ಯಾವುದೇ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಈ ಹಿಂದೆ ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದ ಬಳಿಕ ಪ್ರಧಾನಿ ಮೋದಿ ತಮ್ಮ ತಾಯಿಯನ್ನು ಗಾಂಧಿನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿದ್ದರು. 

ನಿನ್ನೆ ಮೈಸೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಗಾಯಗೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಗೂಂಡಾ ದರ್ಬಾರ್ ಶುರು..!