Select Your Language

Notifications

webdunia
webdunia
webdunia
webdunia

ಸಂಭ್ರಮದ ವೀಡಿಯೋ ಶೇರ್ ಮಾಡಿದ ಮೋದಿ

ಸಂಭ್ರಮದ ವೀಡಿಯೋ ಶೇರ್ ಮಾಡಿದ ಮೋದಿ
ನವದೆಹಲಿ , ಮಂಗಳವಾರ, 8 ಮಾರ್ಚ್ 2022 (13:17 IST)
ನವದೆಹಲಿ : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಹಿಳೆಯರನ್ನು ಶ್ಲಾಘಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಅಂತರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ನಲ್ಲಿ ಮಹಿಳೆಯರ ಸ್ಪೂರ್ತಿದಾಯಕ ಹಾಗೂ ಸಾಧನೆಯನ್ನು ಎತ್ತಿ ತೋರಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. 

ಮನ್ ಕಿ ಬಾತ್ ಕಾರ್ಯಕ್ರಮದ ವಿವಿಧ ಸಂಚಿಕೆಗಳಲ್ಲಿ ನಾವು ಮಹಿಳಾ ಸಬಲೀಕರಣದ ವಿವಿಧ ಅಂಶಗಳನ್ನು ತೋರಿಸಿದ್ದೇವೆ. ತಳಮಟ್ಟದಿಂದ ಮಹಿಳೆಯರನ್ನು ಪ್ರೇರೇಪಿಸುವ ಜೀವನ ಪಯಣವನ್ನು ಪ್ರದರ್ಶಿಸಿದ್ದೇವೆ. ಮನ್ ಕಿ ಬಾತ್ ಕಾರ್ಯಕ್ರಮ ನಾರಿ ಶಕ್ತಿಯ ಸಂಭ್ರಮವನ್ನು ಆಚರಿಸಿರುವ ವೀಡಿಯೋ ಇಲ್ಲಿದೆ ಎಂದು ಮೋದಿ ಟ್ವಿಟ್ಟರ್ನಲ್ಲಿ ಬರೆದಿದ್ದಾರೆ.

ನಮ್ಮ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ. ಇದಕ್ಕಾಗಿ ಮಹಿಳೆಯರಿಗೆ ಘನತೆ ಹಾಗೂ ಅವಕಾಶಗಳನ್ನೂ ನೀಡಿದೆ ಎಂದಿದ್ದಾರೆ.  ಮಹಿಳಾ ದಿನದಂದು ನಮ್ಮ ನಾರಿ ಶಕ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮಹಿಳೆಯರಿಗೆ ನಾನು ವಂದಿಸುತ್ತೇನೆ.


Share this Story:

Follow Webdunia kannada

ಮುಂದಿನ ಸುದ್ದಿ

ನವೀನ್ ಮೃತದೇಹ ಸಿಕ್ಕಿದೆ : ಬೊಮ್ಮಾಯಿ