Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಯಿಂದ ನಾಳೆ ಎರಡು ದಿನಗಳ ಇರಾನ್ ಪ್ರವಾಸ

ಪ್ರಧಾನಿ ಮೋದಿಯಿಂದ ನಾಳೆ ಎರಡು ದಿನಗಳ ಇರಾನ್ ಪ್ರವಾಸ
ನವದೆಹಲಿ , ಶನಿವಾರ, 21 ಮೇ 2016 (12:34 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ಎರಡು ದಿನಗಳ ಪ್ರವಾಸಕ್ಕಾಗಿ ಇರಾನ್ ದೇಶಕ್ಕೆ ಭೇಟಿ ನೀಡಲಿದ್ದು ದ್ವಿಪಕ್ಷೀಯ ಒಪ್ಪಂದಗಳ ಕುರಿತಂತೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಇರಾನ್ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಮೋದಿ ಇರಾನ್‌ ದೇಶದ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮೆನೈ ಅವರನ್ನು ಭೇಟಿ ಮಾಡಲಿದ್ದಾರೆ, ಇರಾನ್ ಅಧ್ಯಕ್ಷ ಹಸನ್ ರೌಹಾನಿಯವರನ್ನು ಕೂಡಾ ಭೇಟಿ ಮಾಡಿ ಉಭಯ ದೇಶದಗಳ ಭಾಂಧವ್ಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಿದ್ದಾರೆ ಎನ್ನಲಾಗಿದೆ. 
 
ಇರಾನ್‌ನ ಆಗ್ನೇಯ ಕರಾವಳಿ ತೀರದಲ್ಲಿ ಬಂದರು ನಿರ್ಮಾಣಕ್ಕೆ ಇರಾನ್ ಮತ್ತು ಭಾರತ ದೇಶಗಳು ವಾಣಿಜ್ಯ ಒಪ್ಪಂದಕ್ಕೆ ಸಹಿಹಾಕಲಿವೆ. ಇಂಧನ, ವಹಿವಾಟು ಮತ್ತು ಸಂಪರ್ಕ ಕ್ಷೇತ್ರಗಳ ಬಗ್ಗೆ ಮೋದಿ ಚರ್ಚೆ ನಡೆಸಲಿದ್ದಾರೆ ಎಂದು ಪ್ರಧಾನಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. 
 
ಇರಾನ್ ಪ್ರವಾಸದ ಸಂದರ್ಭದಲ್ಲಿ 1940 ರಿಂದ ಕಾರ್ಯನಿರ್ವಹಿಸುತ್ತಿರುವ ಏಕೈಕ ಗುರುದ್ವಾರಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ. ಇರಾನ್ ಮತ್ತು ಭಾರತ ದೇಶದ ನಡುವೆ ಮಹತ್ವದ ಒಪ್ಪಂದಗಳಿಗೆ ಸಹಿಹಾಕಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
 
ಪ್ರಧಾನಿ ಮೋದಿಯವರ ಇರಾನ್ ಭೇಟಿಯಿಂದಾಗಿ ಮೂಲಸೌಕರ್ಯ, ಇಂಧನ, ವಹಿವಾಟು ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಯ ಲಾಭವಾಗಲಿದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಪ್ರಧಾನಿ ರಾಜೀವ್ ಗಾಂಧಿ 25ನೇ ಪುಣ್ಯತಿಥಿ: ಸೋನಿಯಾ , ರಾಹುಲ್‌ರಿಂದ ಶೃದ್ಧಾಂಜಲಿ