Webdunia - Bharat's app for daily news and videos

Install App

ಇರಾನ್‌– ಇಸ್ರೇಲ್‌ ಸಂಘರ್ಷ ಶಮನಕ್ಕೆ ಮೋದಿ ರಂಗಪ್ರವೇಶ: ಭಾರತದ ಪ್ರಧಾನಿಗೆ ಧನ್ಯವಾದ ಹೇಳಿದ ಇರಾನ್

Sampriya
ಭಾನುವಾರ, 22 ಜೂನ್ 2025 (16:37 IST)
ನವದೆಹಲಿ: ಇರಾನ್‌– ಇಸ್ರೇಲ್‌ ನಡುವೆ ಸಂಘರ್ಷ ತಾರಕಕ್ಕೆ ಏರಿದ ಬೆನ್ನಲ್ಲೇ ಭಾರತ ಪ್ರಧಾನಿ ನರೇಂದ್ರ ಮೋದಿ ರಂಗಪ್ರವೇಶ ಮಾಡಿದ್ದಾರೆ. ಇರಾನ್‌ನ ಅಧ್ಯಕ್ಷರಿಗೆ ಖುದ್ದಾಗಿ ಕರೆ ಮಾಡಿ ಸಂಘರ್ಷ ಶಮನಕ್ಕೆ ಸಲಹೆ ನೀಡಿದ್ದಾರೆ. 

ಅಮೆರಿಕ ಸೇನೆಯು ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರಿಗೆ ಮೋದಿ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಭಾರತದ ನಿಲುವಿಗೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.

ಇರಾನ್ ಅಧ್ಯಕ್ಷ ಮಸೂದ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದೆ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರವಾಗಿ ಚರ್ಚಿಸಿದೆವು. ಈ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೇನೆ. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷವನ್ನು ಶಮನಗೊಳಿಸಿ ಆದಷ್ಟು ಬೇಗ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಸ್ಥಾಪಿಸುವಂತೆ ಸಲಹೆ ನೀಡಿದ್ದೇನೆ ಎಂದು ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.  

ಮಸೂದ್ ಪೆಜೆಶ್ಕಿಯಾನ್ ಮತ್ತು ಮೋದಿ ನಡುವೆ 45 ನಿಮಿಷಗಳ ಕಾಲ ಮಾತುಕತೆ ನಡೆಯಿತು. ಈ ವೇಳೆ ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವಲ್ಲಿ ಭಾರತ ಸ್ನೇಹಿತ ಮತ್ತು ಪಾಲುದಾರ ಎಂದು ಪೆಜೆಶ್ಕಿಯಾನ್ ಬಣ್ಣಿಸಿದರು. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿ.ಆರ್ ಪಾಟೀಲ್ ಸತ್ಯವನ್ನೇ ಹೇಳಿದ್ದಾರೆ : ವಿಜಯೇಂದ್ರ

ಇರಾನ್ ಮೇಲೆ ಅಮೆರಿಕೆ ಏರ್‌ಸ್ಟ್ರೈಕ್‌‌: ಡೊನಾಲ್ಡ್ ಟ್ರಂಪ್ ಗಂಡೆದೆಯನ್ನು ಕೊಂಡಾಡಿದ ಇಸ್ರೇಲ್ ಪ್ರಧಾನಿ

ಪಹಲ್ಗಾಮ್‌ ದಾಳಿ: ಪಾಕ್‌ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್‌

ಸ್ಟೇಟ್ ಸ್ಪಾನ್ಸರ್ ಕರಪ್ಷನ್‌ಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರವೇ ಉತ್ತೇಜನ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ

ಸ್ನೇಹಿತರೊಂದಿಗೆ ತೋಟದ ಮನೆಗೆ ಪಾರ್ಟಿಗೆ ತೆರಳಿದ್ದ ಯುವಕರಿಬ್ಬರು ಕೃಷಿಹೊಂಡದಲ್ಲಿ ಜಲಸಮಾಧಿ

ಮುಂದಿನ ಸುದ್ದಿ
Show comments