ಪ್ರಧಾನಿ ಮೋದಿ ಪದೇ ಪದೇ ವಿದೇಶಗಳಿಗೆ ಭೇಟಿ ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೀಳುಮಟ್ಟದಾಗಿವೆ. ಮೋದಿ ವಿಶ್ವದ 10 ಪ್ರಮುಖ ನಾಯಕರಲ್ಲಿ ಸ್ಥಾನಪಡೆದಿದ್ದಾರೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಭಾರತ ದೇಶವನ್ನು ವಿಶ್ವದಲ್ಲಿ ಗುರುತಿಸಲಾಗುತ್ತಿದೆ. ಒಂದರ ನಂತರ ಮತ್ತೊಂದು ದೇಶ, ವಿದೇಶಗಳು ಮೋದಿಯವರಿಗಾಗಿ ರೆಡ್ ಕಾರ್ಪೇಟ್ ಹಾಸುತ್ತಿವೆ ಎಂದರು.
ವಿಶ್ವದ 10 ಟಾಪ್ ನಾಯಕರಲ್ಲಿ ಅವರು ಸ್ಥಾನ ಪಡೆದಿದ್ದಾರೆ. ದೇಶವನ್ನು ಅಭಿವೃದ್ಧಿಪಥದತ್ತ ಸಾಗಿಸುತ್ತಿರುವುದಕ್ಕೆ ವಿಶ್ವವೇ ಅವರನ್ನು ಹೊಗಳುತ್ತಿದೆ ಎಂದಿದ್ದಾರೆ.
ಬ್ರಿಕ್ಸ್ ಬ್ಯಾಂಕ್‌ನಲ್ಲಿ ಭಾರತಕ್ಕೆ ಸದಸ್ಯತ್ವ ಸ್ಥಾನ ದೊರೆತಿರುವುದು ಮತ್ತು ವಿಶ್ವಸಂಸ್ಥೆಯಿಂದ ಯೋಗಾ ದಿನಾಚರಣೆ ಆಚರಣೆಗೆ ಮುಂದಾಗಿರುವುದು ಮೋದಿ ವಿಶ್ವ ನಾಯಕ ಎನ್ನುವುದಕ್ಕೆ ಸಾಕ್ಷಿಯಾಗಿವೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರ ವಿದೇಶ ಪ್ರವಾಸಗಳನ್ನು ವಿಪಕ್ಷಗಳು ಟೀಕಿಸುತ್ತಿರುವುದು ಕೀಳುಮಟ್ಟದ ರಾಜಕಾರಣವಾಗಿದೆ. ದೇಶದ ಅಭಿವೃದ್ಧಿಗಾಗಿ ವಿದೇಶಾಂಗ ನೀತಿಗಳಲ್ಲಿ ಬದಲಾವಣೆ ತರಲು ಪ್ರಧಾನಿ ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.