Select Your Language

Notifications

webdunia
webdunia
webdunia
webdunia

ಅಮಿತ್ ಶಾಗೆ ಅಡುಗೆ ಮಾಡಿದವರು ಯಾರು: ಮಾಯಾವತಿ ಹುಡುಕಾಟ

ಅಮಿತ್ ಶಾಗೆ ಅಡುಗೆ ಮಾಡಿದವರು ಯಾರು:  ಮಾಯಾವತಿ ಹುಡುಕಾಟ
ಲಖನೌ , ಶುಕ್ರವಾರ, 3 ಜೂನ್ 2016 (16:32 IST)
ಕಳೆದ ವಾರ ಉತ್ತರ ಪ್ರದೇಶದ ಪ್ರವಾಸದಲ್ಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದಲಿತರ ಮನೆಯಲ್ಲಿ ಊಟ ಮಾಡಿದ್ದರು. ಈ ಕುರಿತು ವಿರೋಧ ಪಕ್ಷಗಳ ಟೀಕಾಪ್ರಹಾರ ಮುಂದುವರೆದಿದ್ದು ಉತ್ತರ ಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಮಿತ್ ಶಾ ದಲಿತ ಮನೆಯಲ್ಲಿ ಊಟ ಮಾಡಿದ್ದರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟೀಕಿಸಿದ ಬೆನ್ನಲ್ಲೇ ಬಿಎಸ್‌ಪಿ ನಾಯಕಿ ಮಾಯಾವತಿ ಶಾ ದಲಿತರ ಮನೆಯಲ್ಲಿ ಶಾ ಅವರಿಗೆ ಅಡುಗೆ ಮಾಡಿದವರು ಯಾರೆಂಬ ಹುಡುಕಾಟದಲ್ಲಿದ್ದಾರೆ.

ಅಂದು ಶಾ ಅವರಿಗೆ ಅಡುಗೆ ಮಾಡಿ ಬಡಿಸಿದವರು ದಲಿತರಾಗಿರಲಿಕ್ಕೆ ಸಾಧ್ಯವೇ ಇಲ್ಲ. ಅವರು ಮೇಲ್ವರ್ಗವದರಾಗಿರಬೇಕು ಎಂಬುದು ಮಾಯಾವತಿ ಅವರಿಗಿರುವ ಬಲವಾದ ನಂಬಿಕೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದನ್ನು ಪತ್ತೆ ಹಚ್ಚುವಂತೆ ತಮಗೆ ಸೂಚನೆ ಬಂದಿದ್ದು ಶಾ ಅವರಿಗಾಗಿ ಅಡುಗೆ ಮಾಡಿದವರು ಯಾರೆಂಬುದನ್ನು ಶೀಘ್ರದಲ್ಲಿಯೇ ಕಂಡು ಹಿಡಿಯುತ್ತೇವೆ ಎಂದು ಪಕ್ಷದ ವಲಯ ಸಂಯೋಜಕರಾದ ಡಾಕ್ಟರ್ ರಾಮ್ ಕುಮಾರ್ ಕುರೀಲ್ ತಿಳಿಸಿದ್ದಾರೆ. 
 
ಅಂದು ಶಾ ಅವರ ಜತೆ ಸುಮಾರು 250 ಜನರಿದ್ದರು. ಅವರಲ್ಲಿ ಕೇವಲ 50 ಜನರು ದಲಿತರ ಮನೆಯಲ್ಲಿ ಊಟ ಮಾಡಿದರು. ಇದು ಕೇಸರಿ ಪಕ್ಷದ ಜಾತೀಯ ಮನಸ್ಥಿತಿಯನ್ನು ತೋರಿಸುತ್ತದೆ. ಅಷ್ಟೇ ಅಲ್ಲದೆ  ಶಾ ಊಟ ಮಾಡಿದ್ದು ಅತಿ ಹಿಂದುಳಿದ ಬಿಂಡ್ ಸಮುದಾಯದವರ ಮನೆಯಲ್ಲಿ ಹೊರತು ದಲಿತರ ಮನೆಯಲ್ಲಲ್ಲ. ಶಾ ತಮ್ಮ ಜತೆ ಕೆಲವು ಜನ ದಲಿತರನ್ನು ಸಹ ಕರೆತಂದಿದ್ದರು ಮತ್ತು ಅವರ ಜತೆ ಕುಳಿತು ಊಟ ಮಾಡಿದರು. ಇದರ ಹಿಂದೆ ಇದ್ದಿದ್ದು ಕೇವಲ ರಾಜಕೀಯ ಉದ್ದೇಶ ಎಂದು ಕುರೀಲ್ ಆರೋಪಿಸಿದ್ದಾರೆ. 
 
ವಾರಣಾಸಿಯ ಸೇವಾಪುರಿಯ ಜೋಗಿಯಾಪುರ್ ಗ್ರಾಮದಲ್ಲಿ ದಲಿತ ಕುಟುಂಬ ಗಿರಿಜಾ ಪ್ರಸಾದ್ ಮತ್ತು ಇಕ್ಬಾಲ್ ಬಿಂದ್ ಎಂಬುವರ ಮನೆಯಲ್ಲಿ ಶಾ ಕಳೆದ ಮಂಗಳವಾರ ನೆಲದಲ್ಲಿ ಕುಳಿತು ಭೋಜನ ಸೇವಿಸಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿ ಕೋಟಿ ಹಣದ ಬೇಡಿಕೆ: ಜಗದೀಶ್ ಶೆಟ್ಟರ್ ಬೇಸರ