Select Your Language

Notifications

webdunia
webdunia
webdunia
webdunia

ಟ್ವಿಟರ್: ಬಿಗ್ ಬಿಯನ್ನು ಹಿಂದಿಕ್ಕಿದ ಮೋದಿ

ಟ್ವಿಟರ್: ಬಿಗ್ ಬಿಯನ್ನು ಹಿಂದಿಕ್ಕಿದ ಮೋದಿ
ನವದೆಹಲಿ , ಶುಕ್ರವಾರ, 26 ಆಗಸ್ಟ್ 2016 (12:40 IST)
ದೇಶದಲ್ಲಿ ಹೆಚ್ಚು ಟ್ವಿಟರ್ ಹಿಂಬಾಲಕರನ್ನು ಹೊಂದಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಿಂದಿಕ್ಕಿದ್ದಾರೆ. 
ಪ್ರಸ್ತುತ ಪ್ರಧಾನಿ ಮೋದಿ 22.1 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದು ದೇಶದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಗರಿಮೆಗೆ ಪಾತ್ರರಾಗಿದ್ದಾರೆ. ಎರಡನೆಯ ಸ್ಥಾನಕ್ಕೆ ಕುಸಿದಿರುವ ಬಚ್ಚನ್ ಹಿಂಬಾಲಕರ ಸಂಖ್ಯೆ 22 ಮಿಲಿಯನ್.
 
ಬಾಲಿವುಡ್‌ನ ಖಾನ್‌ತ್ರಯರಾದ- ಶಾರುಖ್ ಖಾನ್ 20.9 ಮಿಲಿಯನ್, ಸಲ್ಮಾನ್ 19.1 ಮಿಲಿಯನ್ ಮತ್ತು ಅಮಿರ್ 18.3 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು ಕ್ರಮವಾಗಿ ಬಚ್ಚನ್ ಅವರ ಹಿಂದಿನ ಸ್ಥಾನದಲ್ಲಿದ್ದಾರೆ. 
 
2009ರಲ್ಲಿ ಟ್ವಿಟರ್ ಸೇರ್ಪಡೆಯಾಗಿದ್ದ ಮೋದಿ 2015ರಲ್ಲಿ ಸ್ಥಿರವಾದ ವೇಗದಲ್ಲಿ ಪ್ರತಿ ತಿಂಗಳು 2 ಮಿಲಿಯನ್‌ನಂತೆ ಅನುಯಾಯಿಗಳನ್ನು ಪಡೆಯುತ್ತ ಸಾಗಿ ಖಾನ್ ತ್ರಯರನ್ನು ಹಿಂದಿಕ್ಕಿದ್ದರು. ಈಗ ಬಿಗ್ ಬಿ ಕೂಡ ಎರಡನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಪಾನಮತ್ತ ವಿದ್ಯಾರ್ಥಿನಿಯ ಕಾರಿಗೆ ಸಿಕ್ಕಿ ಪಾದಚಾರಿ ಸಾವು