Select Your Language

Notifications

webdunia
webdunia
webdunia
webdunia

ಮೋದಿ ಜನರನ್ನು ಭಿಕ್ಷುಕರನ್ನಾಗಿಸಿದ್ದಾರೆ: ಮಾಯಾವತಿ

ಮೋದಿ ಜನರನ್ನು ಭಿಕ್ಷುಕರನ್ನಾಗಿಸಿದ್ದಾರೆ: ಮಾಯಾವತಿ
ಲಕ್ನೋ , ಬುಧವಾರ, 7 ಡಿಸೆಂಬರ್ 2016 (12:54 IST)
ದೊಡ್ಡ ಮೊತ್ತದ ನೋಟು ಅಮೌಲ್ಯೀಕರಣ ಪ್ರಯೋಗದಿಂದ ಪ್ರಧಾನಿ ಮೋದಿ ದೇಶದ ಜನರನ್ನು ಭಿಕ್ಷುಕರನ್ನಾಗಿಸಿದ್ದಾರೆ ಎಂದು ಬಹುಜನ ಸಮಾಜವಾದಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. 
ದಲಿತ ಚಿಂತಕ, ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ್ ಅವರ 61ನೇ ಪುಣ್ಯತಿಥಿ ಸಂದರ್ಭದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮಾಯಾವತಿ, ಮೋದಿ 90% ಜನರನ್ನು ಭಿಕ್ಷುಕರನ್ನಾಗಿಸಿದ್ದಾರೆ. ತಮ್ಮದೇ ಹಣವನ್ನು ಪಡೆಯಲು ಜನರು ಸರತಿ ಸಾಲಲ್ಲಿ ನಿಲ್ಲಬೇಕಿದೆ ಎಂದು ಅವರು ಅಸಮಧಾನ ವ್ಯಕ್ತ ಪಡಿಸಿದ್ದಾರೆ. 
 
ಅಷ್ಟೇ ಅಲ್ಲದೆ ಒಬಿಸಿ ಮತಗಳನ್ನು ಪಡೆಯಲು ಪ್ರಧಾನಿ ತಮ್ಮ ಜಾತಿಯನ್ನು ಬದಲಾಯಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 
 
ತಮ್ಮ ಮಾತನ್ನು ಮುಂದುವರೆಸುತ್ತಾ ಕಮಲ ಮತ್ತು ಕೈ ಮೇಲೆ ಬಿರುಸಿನ ವಾಗ್ದಾಳಿಗೈದ ಅವರು ಈ ಎರಡು ಪಕ್ಷಗಳು ದಲಿತ ವಿರೋಧಿಯಾಗಿವೆ, ಸರ್ಕಾರಿ ಕೆಲಸಗಳಲ್ಲಿ ಮೀಸಲಾತಿಯನ್ನು ತೆಗೆದುಹಾಕಲು ಪಿತೂರಿ ನಡೆಸುತ್ತಿವೆ ಎಂದು ದೂರಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾತೃಭಾಷೆಯಲ್ಲಿ ಟೈಪಿಸಲು ಹೈಟ್ಯಾಪ್ ಇಂಡಿಕ್ ಕೀಬೋರ್ಡ್