Select Your Language

Notifications

webdunia
webdunia
webdunia
webdunia

ಯುವ ಸಮುದಾಯವನ್ನು ನಿರುದ್ಯೋಗಿಗಳನ್ನಾಗಿ ಮಾಡುವುದು ಮೋದಿ ಸರ್ಕಾರದ ಧ್ಯೇಯ: ಮಲ್ಲಿಕಾರ್ಜುನ ಖರ್ಗೆ

ಯುವ ಸಮುದಾಯವನ್ನು ನಿರುದ್ಯೋಗಿಗಳನ್ನಾಗಿ ಮಾಡುವುದು ಮೋದಿ ಸರ್ಕಾರದ ಧ್ಯೇಯ: ಮಲ್ಲಿಕಾರ್ಜುನ ಖರ್ಗೆ

Sampriya

ಹೊಸದಿಲ್ಲಿ , ಮಂಗಳವಾರ, 9 ಜುಲೈ 2024 (15:28 IST)
ನವದೆಹಲಿ: ಅಧಿಕಾರದಲ್ಲಿರುವ ಮೋದಿ ಸರಕಾರದ  ಧ್ಯೇಯ ಏನೆಂದರೆ ಯುವ ಜನತೆಯನ್ನು ನಿರುದ್ಯೋಗಿಗಳಾನ್ನಾಗಿ ಮಾಡುವುದು ಎಂದು  ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.

ಮಂಗಳವಾರ ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ ಅವರು "ಕಳೆದ 10 ವರ್ಷಗಳಲ್ಲಿ ಕೋಟ್ಯಂತರ ಯುವಕರ ಕನಸುಗಳನ್ನು ಭಗ್ನಗೊಳಿಸಿದ ಹೊಣೆ ಮೋದಿ ಸರ್ಕಾರದ್ದು ಆಗಿದೆ ಎಂದು ಆರೋಪಿಸಿದರು.

ಎನ್ಎಸ್ಎಸ್ಒ (ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ) ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆಯ ಪ್ರಕಾರ, ಉತ್ಪಾದನಾ ವಲಯದಲ್ಲಿ, 2015 ಮತ್ತು 2023 ರ ನಡುವಿನ ಏಳು ವರ್ಷಗಳಲ್ಲಿ 54 ಲಕ್ಷ ಉದ್ಯೋಗಗಳು ಅಸಂಘಟಿತ ಘಟಕಗಳಲ್ಲಿ ಕಳೆದುಹೋಗಿವೆ ಎಂದು ಅವರು ಹೇಳಿದರು.

"2010-11 ರಲ್ಲಿ, 10.8 ಕೋಟಿ ಉದ್ಯೋಗಿಗಳು ಭಾರತದಾದ್ಯಂತ ಅಸಂಘಟಿತ, ಕೃಷಿಯೇತರ ಉದ್ಯಮಗಳಲ್ಲಿ ಕೆಲಸ ಮಾಡುತ್ತಿದ್ದರು, ಇದು 2022-23 ರಲ್ಲಿ 10.96 ಕೋಟಿಯಾಗಿದೆ - ಅಂದರೆ, 12 ವರ್ಷಗಳಲ್ಲಿ ಕೇವಲ 16 ಲಕ್ಷದ ಅತ್ಯಲ್ಪ ಹೆಚ್ಚಳವಾಗಿದೆ" ಎಂದು ಅವರು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಮುಡಾ ಸೊಳ್ಳೆಯಿಂದ ಕಚ್ಚಿಸಿಕೊಂಡ ಸಿದ್ದರಾಮಯ್ಯಗೆ ಡೆಂಗ್ಯೂ ಬಗ್ಗೆ ನಿರ್ಲಕ್ಷ್ಯ: ಅಶ್ವತ್ಥನಾರಾಯನ್