Select Your Language

Notifications

webdunia
webdunia
webdunia
webdunia

ಅಡ್ವಾಣಿಗೆ ಉತ್ತರಿಸಿದ ಮೋದಿ

Election-2014
ಅಹಮದಾಬಾದ್ , ಶನಿವಾರ, 17 ಮೇ 2014 (08:32 IST)
ತಮ್ಮ ಪಕ್ಷದ ಗೆಲುವಿಗೆ ಕಾಂಗ್ರೆಸ್ಸಿನ ದುರಾಡಳಿತವೇ ಕಾರಣ ಎಂದು ಹೇಳಿಕೆ ನೀಡಿದ್ದ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯ ಗೆಲುವಿನ ಶ್ರೇಯವನ್ನು ತಮ್ಮ ಶಿಷ್ಯ ಮೋದಿಗೆ ನೀಡಲು ಸುತಾರಾಂ ತಯಾರಿಲ್ಲ. 
 
ತಮ್ಮ ರಾಜಕೀಯ ಗುರು ಅಡ್ವಾಣಿಕೆಗೆ ತಕ್ಕ ಉತ್ತರ ನೀಡಿರುವ ಮೋದಿ, "ಈ ಮತದಾನ ಸರಕಾರದ ವಿರುದ್ಧ ಎಂದು ಕೆಲವು ಜನರು ಹೇಳುತ್ತಿದ್ದಾರೆ. ಆದರೆ ಸರಕಾರ ಎಲ್ಲಿತ್ತು? ಸರಕಾರದ ಅಸ್ತಿತ್ವವೇ ಇರಲಿಲ್ಲ. ವಾಸ್ತವವಾಗಿ ಹೇಳಬೇಕೆಂದರೆ ಶೂನ್ಯತೆ ವ್ಯಾಪ್ತವಾಗಿತ್ತು. ಈ ಶೂನ್ಯತೆಯನ್ನು ತುಂಬಲು ಜನರು ತಮ್ಮ ಧ್ವನಿಯನ್ನು ಎತ್ತರಿಸಿದ್ದಾರೆ". 
 
"ನನ್ನಂತಹ ಸಾಮಾನ್ಯ ವ್ಯಕ್ತಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದು ನಮ್ಮ ಭಾರತೀಯ ಗಣತಂತ್ರದ ವಿಶೇಷವಾಗಿದೆ, ಶಕ್ತಿಯಾಗಿದೆ. ಈ ಚುನಾವಣೆ ಹೊಸ ಶಕ್ತಿಯನ್ನು ಸೃಷ್ಟಿಸಲಿದೆ. ಇದು ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಲಿದೆ ಎಂಬ ವಿಶ್ವಾಸ ನನಗಿದೆ" ಎಂದು ಮೋದಿ ಹೇಳಿದ್ದಾರೆ. 

Share this Story:

Follow Webdunia kannada