Daily Horoscope
✕

ಹಾವಿನ ಮೈಸವರಿದ ಪ್ರಿಯಾಂಕಾ ಗಾಂಧಿಯ ಕಾಲೆಳೆದ ಪ್ರಧಾನಿ ಮೋದಿ

Webdunia
ಶನಿವಾರ, 4 ಮೇ 2019 (12:21 IST)
ನವದೆಹಲಿ : ಸ್ಥಳೀಯ ಹಾವಾಡಿಗರ ಬಳಿ ಇದ್ದ ಹಾವನ್ನು ಬುಟ್ಟಿಯಿಂದ ತೆಗೆದು ಮೈ ಸವರಿದ ಪ್ರಿಯಾಂಕಾ ಗಾಂಧಿಯ ಅವರ ಕುರಿತು ಟೀಕೆ ಮಾಡುವುದರ ಮೂಲಕ  ಇದೀಗ ಪ್ರಧಾನಿ ಮೋದಿ ಅವರು ನೆಹರು ವಂಶಸ್ಥರ ಕಾಲೆಳೆದಿದ್ದಾರೆ.




ಇತ್ತೀಚೆಗಷ್ಟೇ ಪ್ರಿಯಾಂಕಾ ಗಾಂಧಿ ರಾಯ್ ಬರೇಲಿ ಕ್ಷೇತ್ರದಲ್ಲಿ ಪ್ರಚಾರದ ವೇಳೆ, ಸ್ಥಳೀಯ ಹಾವಾಡಿಗರ ಬಳಿ ಇದ್ದ ಹಾವನ್ನು ಬುಟ್ಟಿಯಿಂದ ತೆಗೆದು ಮೈ ಸವರಿದ್ದರು. ಈ ವಿಡಿಯೋ ಸಾಕಷ್ಟು ಸುದ್ದಿಯಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡದ ಪ್ರಧಾನಿ ನರೇಂದ್ರ ಮೋದಿ ಅವರು, ದಶಕಗಳ ಹಿಂದೆ ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರು  ಹಾವಾಡಿಗ ಹಾವಾಡಿಸುತ್ತಿರುವ ದೃಶ್ಯವನ್ನು ನೋಡಿ ಆನಂದಿಸುತ್ತಿರುವ ಫೋಟೋ ಒಂದನ್ನು ಉಲ್ಲೇಖಿಸಿ ಪ್ರಿಯಾಂಕಾ ಗಾಂಧಿಯ ಕಾಲೆಳೆದಿದ್ದಾರೆ.


ಜವಹರ್ ಲಾಲ್ ನೆಹರು ತಮ್ಮ ಕಾಲದಲ್ಲಿ ಮಾಡಿದ ಅದೇ ಕೆಲಸವನ್ನು ಅವರ ನಾಲ್ಕನೇ ತಲೆಮಾರು ಮಾಡುತ್ತಿರುವುದು ದುರದೃಷ್ಟಕರ. ಭಾರತ ಈಗ ಕೇವಲ ಹಾವಾಡಿಗರ ದೇಶವಾಗಿ ಮಾತ್ರ ಉಳಿದಿಲ್ಲ. ಅದರ ಹೊರತಾಗಿಯೂ ತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಆದರೆ ಈ ವಿಚಾರ ಗಾಂಧಿ ಕುಟುಂಬಕ್ಕೆ ಇನ್ನೂ ಅರ್ಥವಾಗಿಲ್ಲ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿಯಂತಹ ದುರಂತ ನಾಯಕನ ಸಹಸವಾಸ ಮಾಡಿ ಖರ್ಗೆಯವರೂ ಹೀಗಾದ್ರು: ಛಲವಾದಿ ನಾರಾಯಣಸ್ವಾಮಿ

ಅಪ್ಪ, ಮಗ ಇಬ್ರೂ ಸರಿಯಿಲ್ಲ, ಖರ್ಗೆ ಬಾಯಿ ಫಿನಾಯಿಲ್ ಹಾಕಿ ತೊಳೆಯಬೇಕು: ಆರ್ ಅಶೋಕ್ ವಾಗ್ದಾಳಿ

ಹೋಟೆಲ್ ಕಾರಿಡಾರ್ ನಲ್ಲಿ ದೊಪ್ಪನೆ ಬಿದ್ದ ನವವಧು, ಎತ್ತಿ ಹೋದ ಪತಿ: 5 ಸೆಕೆಂಡ್ನ ಶಾಕಿಂಗ್ ಸಿಸಿಟಿವಿ ದೃಶ್ಯ ವೈರಲ್ Video

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ವೈದ್ಯನಂತೆ ನಟಿಸಿ ಚುಚ್ಚುಮದ್ದು ನೀಡಲು ಮುಂದಾದ ವ್ಯಕ್ತಿ: ತಕ್ಷಣವೇ ಓಡಿಹೋದ ನಕಲಿ ವಿಕಲಚೇತನ ಭಿಕ್ಷುಕ Video

ಮುಂದಿನ ಸುದ್ದಿ
Show comments