Select Your Language

Notifications

webdunia
webdunia
webdunia
webdunia

ಗೋ ರಕ್ಷಕರ ಹೆಸರಲ್ಲಿ ಗೂಂಡಾಗಿರಿ: ಕೇಂದ್ರದ ಪರೋಕ್ಷ ಬೆಂಬಲ: ಖರ್ಗೆ ವಾಗ್ದಾಳಿ

ಗೋ ರಕ್ಷಕರ ಹೆಸರಲ್ಲಿ ಗೂಂಡಾಗಿರಿ: ಕೇಂದ್ರದ ಪರೋಕ್ಷ ಬೆಂಬಲ: ಖರ್ಗೆ ವಾಗ್ದಾಳಿ
ನವದೆಹಲಿ , ಸೋಮವಾರ, 31 ಜುಲೈ 2017 (15:05 IST)
ನವದೆಹಲಿ: ಗೋ ರಕ್ಷಕರ ಹೆಸರಲ್ಲಿ  ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ದೇಶದಲ್ಲಿ ಗೂಂಡಾಗಿರಿ ಪ್ರದರ್ಶಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
 
ಲೋಕಸಭೆ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋರಕ್ಷಣೆ ಹೆಸರಲ್ಲಿ ದೇಶದಲ್ಲಿ ಗೂಂಡಾಗಿರಿ ನಡೆಸಲಾಗುತ್ತಿದ್ದು, ಆಡಳಿತಾರೂಢ ಎನ್ ಡಿಎ ಸರ್ಕಾರ ಪರೋಕ್ಷವಾಗಿ ಬಲಪಂಥೀಯ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಅಲ್ಲದೇ ಕಳೆದ ಮೂರು ವರ್ಷಗಳಲ್ಲಿ ನಡೆದ ಸರಣಿ ದಾಳಿ ಕುರಿತ ಪಟ್ಟಿಯನ್ನು ಕಲಾಪದಲ್ಲಿ ಓದಿದರು.
 
ಇಂದು ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮೇಲೆ ದಾಳಿ ನಡೆಸಲಾಗುತ್ತಿದೆ. ಹಿಂದುಗಳೇ ಹಿಂದುವನ್ನು ಕೊಲ್ಲುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮರೇ ಮುಸ್ಲಿಮರನ್ನು ಹತ್ಯೆಗೈಯುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಬಿಜೆಪಿ ತಮ್ಮ ಸಿದ್ದಾಂತವನ್ನು ಹೇರಲು ಯತ್ನಿಸುತ್ತಿದೆ. ಇದರಿಂದಾಗಿ ಇಂಥಹ ಘಟನೆಗಳು ಹೆಚ್ಚುತ್ತಿವೆ. ಈ ಘಟನೆಗಳ ಹಿಂದೆ ವಿಎಚ್ ಪಿ, ಬಜರಂಗದಳ ಕಾರ್ಯಕರ್ತರೇ ಇದ್ದಾರೆ ಎಂದು ಆರೋಪಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ತಾಳಿ ಕಿತ್ತು ವರನ ಕೈಗಿಟ್ಟು ಬಾಯ್`ಫ್ರೆಂಡ್ ಜೊತೆ ವಧು ಎಸ್ಕೇಪ್..!