Publish Date: Wed, 01 Mar 2023 (09:58 IST)
Updated Date: Wed, 01 Mar 2023 (10:32 IST)
ಲಕ್ನೋ : 6 ವರ್ಷದ ಬಾಲಕಿಯ ಭಾಗಶಃ ಅಸ್ಥಿಪಂಜರ ಪತ್ತೆಯಾದ ಘಟನೆ ಉತ್ತರ ಪ್ರದೇಶದ ಕಾನ್ಪುರದ ಗ್ರಾಮವೊಂದರಲ್ಲಿ ನಡೆದಿದೆ.
ಬಾಲಕಿಯನ್ನು ಕೊಲೆ ಮಾಡುವ ಮೊದಲು ಲೈಂಗಿಕ ದೌರ್ಜನ್ಯ ನಡೆಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಚಂದ್ರಭಾನ್, ಆತನ ಪತ್ನಿ ಸುಧಾ ಹಾಗೂ ಸಹೋದರ ಸುಲ್ತಾನ್ ಸೇರಿದಂತೆ ಮೂವರು ಶಂಕಿತರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಬಾಲಕಿಯು ಶನಿವಾರ ಅದೇ ಗ್ರಾಮದಲ್ಲಿರುವ ಚಿಕ್ಕಪ್ಪನ ಮನೆಗೆ ಹೋಗುವುದಾಗಿ ಹೇಳಿ ಹೊರಟಿದ್ದಳು. ಅದಾದ ಬಳಿಕ ಆಕೆ ನಾಪತ್ತೆ ಆಗಿದ್ದಳು. ರಾತ್ರಿ ಎಷ್ಟೇ ಸಮಯವಾದರೂ ಮನೆಗೆ ಬಾಲಕಿಯು ಬಾರದಿದ್ದರಿಂದ ಆಕೆಯ ಪೋಷಕರು ಹುಡುಕಲು ಪ್ರಾರಂಭಿಸಿದ್ದಾರೆ.
ಕೊನೆಗೂ ಬಾಲಕಿಯ ಸುಳಿವು ಪತ್ತೆ ಆಗದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.