Select Your Language

Notifications

webdunia
webdunia
webdunia
webdunia

ಮನೆಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ

ಮನೆಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ
ಸಂಬಾಲ , ಶನಿವಾರ, 27 ಆಗಸ್ಟ್ 2016 (09:06 IST)
ಮನೆಯೊಂದಕ್ಕೆ ನುಗ್ಗಿದ ಯುವಕನೋರ್ವ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಪಾರಾದ ಘಟನೆ ಉತ್ತರ ಪ್ರದೇಶದ ಸಂಬಾಲದಲ್ಲಿ ನಡೆದಿದೆ. 
 
ಈ ಸಂದರ್ಭದಲ್ಲಿ ಬಾಲಕಿಯ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ. 
 
ಪ್ರಾಥಮಿಕ ಮಾಹಿತಿಯ ಪ್ರಕಾರ 13 ವರ್ಷದ ಬಾಲಕಿಯ ಸಂಬಂಧಿಕರ ಮನೆಯಲ್ಲಿ ಈ ದುಷ್ಕೃತ್ಯ ನಡೆದಿದೆ.
 
ಬಾಲಕಿಯ ಚಿಕ್ಕಮ್ಮ ಹೊರಗೆ ಹೋಗುತ್ತಿದ್ದುದನ್ನು ನೋಡಿದ ದುರುಳ ಯುವಕ ಮನೆಗೆ ನುಗ್ಗಿ ದುಷ್ಕೃತ್ಯವನ್ನೆಸಗಿದ್ದಾನೆ.
 
ಮನೆಗೆ ಮರಳಿದ ಚಿಕ್ಕಮ್ಮನಿಗೆ ಬಾಲಕಿ ನಡೆದ ವಿಷಯವನ್ನು ತಿಳಿಸಿದ್ದು ಇಬ್ಬರು ಸೇರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. 
 
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

Share this Story:

Follow Webdunia kannada

ಮುಂದಿನ ಸುದ್ದಿ

ಬಡವರು ಹುಟ್ಟಿರುವುದೇ ಶ್ರೀಮಂತರ ಸೇವೆಗಾಗಿ: ಪಾಕ್ ರಾಜಕಾರಣಿ