Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ ಶಿಕ್ಷಕ

ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ ಶಿಕ್ಷಕ
ಜಮ್ಮು , ಶನಿವಾರ, 23 ಜುಲೈ 2016 (19:33 IST)
ಕಾಮುಕ ಶಿಕ್ಷಕನೊಬ್ಬ ಶಾಲೆಯ ಕೋಣೆಯೊಂದರಲ್ಲಿಯೇ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ಜಮ್ಮು ಕಾಶ್ಮಿರದ ರಾಮ್‌ಬನ್ ಜಿಲ್ಲೆಯಿಂದ ವರದಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ರಾಮಬನ್ ಜಿಲ್ಲೆಯ ಬನಿಹಾಲ್ ತಹಸೀಲ್ ವ್ಯಾಪ್ತಿಗೆ ಬರುವ ಚಂಬಲ್‌ಬಸ್ ಗ್ರಾಮದಲ್ಲಿ ಘಟನೆ ನಡೆದಿದ್ದು ಆರೋಪಿಯನ್ನು ಹಯಾತ್ ಖಾನ್ ಎಂದು ಗುರುತಿಸಲಾಗಿದೆ. 
 
ಶಾಲಾ ಶಿಕ್ಷಕನಾದ ಹಯಾತ್ ಖಾನ್ ಬಾಲಕಿಗೆ ಕ್ಲಾಸ್ ಮುಗಿದ ನಂತರ ಕೆಲ ಹೊತ್ತು ಕಾಯಲು ಹೇಳಿ, ವಿದ್ಯಾರ್ಥಿಗಳು ತೆರಳಿದ ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಬಾಲಕಿ ಮನೆಗೆ ಬಂದ ಕೂಡಲೇ ಶಾಲೆಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ನಂತರ ಪೋಷಕರು ಬಾಲಕಿಯನ್ನು ಕರೆದುಕೊಂಡು ಬನಿಹಾಳ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಬಾಲಕಿಯ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
 
ನಾಪತ್ತೆಯಾಗಿದ್ದ ಆರೋಪಿಯ ಪತ್ತೆಗಾಗಿ ಭಾರಿ ಹುಡುಕಾಟ ನಡೆಸಲಾಯಿತು. ನಂತರ ಆರೋಪಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಾಸೀರ್ ಅಹ್ಮದ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೆನ್ಸೆಕ್ಸ್: 33 ಪಾಯಿಂಟ್‌ಗಳ ಕುಸಿತ ಕಂಡ ಶೇರುಪೇಟೆ ಸೂಚ್ಯಂಕ