Select Your Language

Notifications

webdunia
webdunia
webdunia
webdunia

ಸಚಿವಾಲಯದ ಟ್ವಿಟ್ಟರ್ ಖಾತೆ ಹ್ಯಾಕ್!

ಸಚಿವಾಲಯದ ಟ್ವಿಟ್ಟರ್ ಖಾತೆ ಹ್ಯಾಕ್!
ನವದೆಹಲಿ , ಬುಧವಾರ, 12 ಜನವರಿ 2022 (16:16 IST)
ನವದೆಹಲಿ : ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ.

ಸಚಿವಾಲಯದ ಟ್ವಿಟರ್ ಖಾತೆಯನ್ನು ಎಲೋನ್ ಮಸ್ಕ್ ಎಂದು ಹ್ಯಾಕರ್ಗಳು ಬದಲಾಯಿಸಿದ್ದಾರೆ.

ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಿ, ʻಉತ್ತಮ ಕೆಲಸ. ಹೊಸ ವರ್ಷದ ಕಾರ್ಯಕ್ರಮʼ ಎಂದು ಟ್ವೀಟ್ ಮಾಡಲಾಗಿದೆ. ಅಲ್ಲದೇ ಕ್ಯಾಲಿಫೋರ್ನಿಯಾದಲ್ಲಿ ಸೌರ ತೆರಿಗೆ ಕ್ರಮವನ್ನು ಟೀಕಿಸಿದ ಎಲೋನ್ ಮಸ್ಕ್ ಅವರ ಹ್ಯಾಂಡಲ್ ಪೋಸ್ಟ್ ಅನ್ನು ಮರು ಟ್ವೀಟ್ ಮಾಡಲಾಗಿದೆ.

ಇದಾದ ಕೆಲವೇ ಹೊತ್ತಿನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಟ್ವಿಟ್ಟರ್ ಖಾತೆಯ ಮೇಲೆ ನಿಯಂತ್ರಣ ಹೊಂದಿದ್ದು, ಪೋಸ್ಟ್ಗಳನ್ನು ತೆಗೆದುಹಾಕಿದೆ. ಆದರೆ ಹ್ಯಾಕ್ ಆಗಿರುವ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2020ರ ಜುಲೈನಲ್ಲೂ ಸುಮಾರು ಬರಾಕ್ ಒಬಾಮಾ, ಜೋ ಬೈಡೆನ್, ಬಿಲ್ ಗೇಟ್ಸ್, ಎಲೋನ್ ಮಸ್ಕ್ ಸೇರಿದಂತೆ ಅನೇಕ ಪ್ರಮುಖರ ಟ್ವಿಟ್ಟರ್ ಖಾತೆಗಳು ಹ್ಯಾಕ್ ಆಗಿದ್ದವು. ಆ ಮೂಲಕ ಬಿಟ್ ಕಾಯಿನ್ ಹಗರಣವನ್ನು ಪ್ರಚಾರ ಮಾಡಲಾಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆ ನಡೆಸುವ ಬಗ್ಗೆ ತೀರ್ಮಾನ: ಬಿ ಸಿ ನಾಗೇಶ್