ಮಾರ್ಚ್ 19 ರಂದು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನ್ ಬೆಂಬಲಿಗರು ನಡೆಸಿದ ದಾಳಿಯ ತನಿಖೆಗಾಗಿ NIA ತಂಡ ಲಂಡನ್‌ಗೆ ತೆರಳಿದೆ... ಭಾರತೀಯ ಹೈಕಮಿಷನ್‌ನಲ್ಲಿದ್ದ ರಾಷ್ಟ್ರೀಯ ಧ್ವಜವನ್ನು ಪ್ರತಿಭಟನೆಯ ಸಂದರ್ಭದಲ್ಲಿ ಖಲಿಸ್ತಾಸ್ ಬೆಂಬಲಿಗರು ನೆಲಕ್ಕುರುಳಿಸಿದ್ದರು, ಘಟನೆ ನಡೆದು ಎರಡು ತಿಂಗಳ ನಂತರ, ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡ ಸೋಮವಾರ ಯುನೈಟೆಡ್ ಕಿಂಗ್‌ಡಮ್‌ನ ರಾಜಧಾನಿಗೆ ತೆರಳಿ ತನಿಖೆ ನಡೆಸಿತು. ಘಟನೆ ಮೂಲಗಳ ಪ್ರಕಾರ, ಬ್ರಿಟಿಷ್ ನೆಲದಲ್ಲಿ ಎನ್‌ಐಎ ತಂಡವು ತನಿಖೆ ನಡೆಸುತ್ತಿರುವುದು ಇದೇ ಮೊದಲು. ಏಪ್ರಿಲ್‌ನಲ್ಲಿ, ಗೃಹ ಸಚಿವಾಲಯದ ಭಯೋತ್ಪಾದನೆ ನಿಗ್ರಹ ಮತ್ತು ಮೂಲಭೂತವಾದ ವಿಭಾಗವು NIAಗೆ ಪ್ರಕರಣವನ್ನು ಹಸ್ತಾಂತರಿಸಿತ್ತು. ಏಪ್ರಿಲ್‌ನಲ್ಲಿ ಯುಕೆ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ನಂತರ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವ ನಿರ್ಧಾರವನ್ನು MHA ತೆಗೆದುಕೊಂಡಿತು. ಗೃಹ ಸಚಿವಾಲಯದ ಆದೇಶದ ಆಧಾರದ ಮೇಲೆ ಭಯೋತ್ಪಾದನಾ ನಿಗ್ರಹ ಸಂಸ್ಥೆ FIR ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಸಂಸ್ಥೆಯು ದೆಹಲಿ ಪೊಲೀಸರಿಂದ ಪ್ರಕರಣವನ್ನು ವಹಿಸಿಕೊಂಡಿದ್ದು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿFIR ದಾಖಲಿಸಿದೆ ಮತ್ತು ಪ್ರಸ್ತುತ ತನಿಖೆ ನಡೆಸುತ್ತಿದೆ.