ಸಂಭಾಲ್ : ಪ್ರಧಾನ ಮಂತ್ರಿಯ ಪರಿಹಾರ ನಿಧಿಯಿಂದ ಆರ್ಥಿಕ ಸಹಾಯದ ನೆಪದಲ್ಲಿ ವಿಧವೆಯೊಬ್ಬರ ಮೇಲೆ ಸಾಮೂಹಿಕ ಮಾನಭಂಗ ನಡೆಸಿದ ಘಟನೆ ಉತ್ತರ ಪ್ರದೇಶದ ಶಂಭಾಲ್ ಜಿಲ್ಲೆಯ ನಖಾಸಾ ಗ್ರಾಮದಲ್ಲಿ ನಡೆದಿದೆ.
									
										
								
																	
ಆರೋಪಿ ಕಚೇರಿಯ ಗುಮಾಸ್ತನೆಂದು ಹೇಳಿಕೊಂಡು ಪಿಎಂ ಪರಿಹಾರ ನಿಧಿಯಿಂದ ಆಕೆಗೆ  5ಲಕ್ಷ ರೂ ಹಣ ಕೊಡಿಸುವುದಾಗಿ ಹೇಳಿ ಅಧಿಕಾರಿಯನ್ನು ಭೇಟಿಯಾಗುವ ನೆಪದಲ್ಲಿ ಮಾವಿನ ತೋಟಕ್ಕೆ ಕರೆದೊಯ್ದು ಅಲ್ಲಿ ತನ್ನ ಸ್ನೇಹಿತರ ಜೊತೆ ಸೇರಿ ಗನ್ ಪಾಯಿಂಟ್ ತೋರಿಸಿ ಮಾನಭಂಗ ಎಸಗಿದ್ದಾರೆ. ಅಲ್ಲದೇ ಈ ಅಪರಾಧವನ್ನು ವಿಡಿಯೋ ಮಾಡಿ ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
									
			
			 
 			
 
 			
			                     
							
							
			        							
								
																	ಈ ಬಗ್ಗೆ ಮಹಿಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೂ ಕೂಡ ಪೊಲೀಸರು ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ ಎನ್ನಲಾಗಿದೆ.