Publish Date: Fri, 07 May 2021 (11:50 IST)
Updated Date: Fri, 07 May 2021 (11:53 IST)
ಜೈಪುರ : ಜೈಪುರದಲ್ಲಿ ಸ್ವಯಂ ಘೋಷಿತ ದೇವಮಾನವನೊಬ್ಬ ನಾಲ್ವರು ಮಹಿಳೆಯರ ಮೇಲೆ ಮಾನಭಂಗ ಎಸಗಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಸತ್ಸಂಗ ಮತ್ತು ಇತರ ಕಾರ್ಯಗಳಿಗೆ ಹಾಜರಾಗಲು ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಸೇವೆಯ ಹೆಸರಿನಲ್ಲಿ ಅವರು ಒಂದೆರಡು ದಿನ ಆಶ್ರಮದಲ್ಲಿದ್ದಾಗ ಅವರ ಮೇಲೆ ದೇವಮಾನವ ಮಾನಭಂಗ ಎಸಗಿದ್ದಾನೆ.
ಈ ಬಗ್ಗೆ ಮಹಿಳೆಯರು ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.