Publish Date: Tue, 09 Feb 2021 (08:52 IST)
Updated Date: Tue, 09 Feb 2021 (08:55 IST)
ಮಧುರೈ : 65 ವರ್ಷದ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ತಮಿಳುನಾಡಿನ ಮಧುರೈ ನಲ್ಲಿ ನಡೆದಿದೆ.
ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿಗೆ ಚಾಕೋಲೇಟ್ ನೀಡಿ ಮನೆಯ ಸಮೀಪವಿರುವ ಜಾನುವಾರು ಶೆಡ್ ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿ ನೋವಿನಿಂದ ನರುಳುತ್ತಿದ್ದ ಹಿನ್ನಲೆಯಲ್ಲಿ ತಾಯಿ ಪ್ರಶ್ನಿಸಿದಾಗ ಆಕೆ ನಡೆದ ವಿಚಾರ ತಿಳಿಸಿದ್ದಾಳೆ. ಈ ಬಗ್ಗೆ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.