Select Your Language

Notifications

webdunia
webdunia
webdunia
webdunia

ಪಾಕಿಸ್ತಾನವನ್ನು ಕೆರಳಿಸಬೇಡಿ, ಉದ್ರಿಕ್ತತೆ ಇಳಿಮುಖವಾಗಲಿ: ಪ್ರಧಾನಿಗೆ ಮೆಹಬೂಬಾ ಮುಫ್ತಿ ಮನವಿ

ಪಾಕಿಸ್ತಾನವನ್ನು ಕೆರಳಿಸಬೇಡಿ, ಉದ್ರಿಕ್ತತೆ ಇಳಿಮುಖವಾಗಲಿ: ಪ್ರಧಾನಿಗೆ ಮೆಹಬೂಬಾ ಮುಫ್ತಿ ಮನವಿ
ನವದೆಹಲಿ , ಗುರುವಾರ, 6 ಅಕ್ಟೋಬರ್ 2016 (12:40 IST)
ನೆರೆರಾಷ್ಟ್ರವಾದ ಪಾಕಿಸ್ತಾನದೊಂದಿಗಿನ ಉದ್ರಿಕ್ತತೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಿ ಎಂದು ಜಮ್ಮು ಕಾಶ್ಮಿರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.
 
ನವದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ, ಮೆಹಬೂಬಾ ಜಮ್ಮು ಕಾಶ್ಮಿರದ ರಾಜಕೀಯ, ಆರ್ಥಿಕ ಮತ್ತು ಅಭಿವೃದ್ಧಿಗಾಗಿ ನೆರೆರಾಷ್ಟ್ರದೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ. 
 
ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ನಡೆದ ಸೀಮಿತ ದಾಳಿಯ ನಂತರ ಮೊದಲ ಬಾರಿಗೆ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಮುಫ್ತಿ, ಗಡಿರೇಖೆ ಭದ್ರತೆ ಕುರಿತಂತೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ,
 
ಕಳೆದ 88 ದಿನಗಳಿಂದ ಜಮ್ಮು ಕಾಶ್ಮಿರದಲ್ಲಿ ಜನಜೀವನ ಅಸ್ತವ್ಯಸ್ಥವಾಗಿದ್ದು ರಾಜ್ಯದ ಜನತೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಜನರಿಗೆ ನೆಮ್ಮದಿ ನೀಡುವ ಕಾಲ ಇದಾಗಿದೆ ಎಂದು ತಿಳಿಸಿದ್ದಾರೆ.  
 
ಕೇಂದ್ರ ಸರಕಾರ ಜಮ್ಮು ಕಾಶ್ಮಿರದ ನಾಯಕರ ಜೊತೆ ಚರ್ಚಿಸಿ, ಸ್ಥಳೀಯ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಪರಿಹಾರ ಒದಗಿಸಿಕೊಡಬೇಕು ಎಂದು ಜಮ್ಮು ಕಾಶ್ಮಿರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ ಚಿಕಿತ್ಸೆಗೆ ಏಮ್ಸ್ ವೈದ್ಯರ ತಂಡ