Select Your Language

Notifications

webdunia
webdunia
webdunia
webdunia

ಬದುಕಿರುವ ಬಾಲಿವುಡ್ ನಟನಿಗೆ ಶ್ರದ್ದಾಂಜಲಿ ಸಲ್ಲಿಸಿದ ಶಾಸಕರು!

ಬದುಕಿರುವ ಬಾಲಿವುಡ್ ನಟನಿಗೆ ಶ್ರದ್ದಾಂಜಲಿ ಸಲ್ಲಿಸಿದ ಶಾಸಕರು!
Meghalaya , ಸೋಮವಾರ, 10 ಏಪ್ರಿಲ್ 2017 (08:00 IST)
ಮೇಘಾಲಯ: ಸಾಮಾನ್ಯವಾಗಿ ಮೃತಪಟ್ಟ ವ್ಯಕ್ತಿಯ ಗೌರವಾರ್ಥ ಶ್ರದ್ಧಾಂಜಲಿ ಸಲ್ಲಿಸುವುದು ಸಾಮಾನ್ಯ. ಆದರೆ ಮೇಘಾಲಯದ ಶಾಸಕರು ಬದುಕಿರುವ ಬಾಲಿವುಡ್ ನಟನಿಗೆ ಮೌನ ಪ್ರಾರ್ಥನೆ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

 

ಇತ್ತೀಚೆಗೆ ಕ್ಯಾನ್ಸರ್ ಗೆ ತುತ್ತಾಗಿ ಆಸ್ಪತ್ರೆ ಸೇರಿದ್ದ ನಟ ವಿನೋದ್ ಖನ್ನಾ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಆದರೆ ಇದರ ನಡುವೆ ಯಾರೋ ಅವರ ಸಾವಿನ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು.

 
ಇದನ್ನೇ ನಂಬಿದ ಮೇಘಾಲಯ ಬಿಜೆಪಿ ಸದಸ್ಯರು, ಲೋಕಸಭಾ ಸದಸ್ಯರೂ ಸೇರಿದಂತೆ ಎಲ್ಲರೂ, ಎರಡು ನಿಮಿಷ ಮೌನ ಪ್ರಾರ್ಥನೆ ನಡೆಸಿಯೇ ಬಿಟ್ಟರು. ಆದರೆ ನಂತರ ಹೇಗೋ ಇದೆಲ್ಲಾ ಸುಳ್ಳು ಸುದ್ದಿ ಎಂದು ಗೊತ್ತಾದ ಮೇಲೆ ಕ್ಷಮೆ ಕೋರಿದ್ದಾರೆ. ಅಲ್ಲದೆ ನಮ್ಮಿಂದ ತಪ್ಪಾಗಿದೆ. ವಿನೋದ್ ಖನ್ನಾ ಇನ್ನೂ ಹಲವು ವರ್ಷ ಆರೋಗ್ಯವಾಗಿರಲಿ ಎಂದು ಹಾರೈಸಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಗರೇಟ್ ತರಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಗೇ ಚಾಕುವಿನಿಂದ ಇರಿದು ಕೊಂದೇ ಬಿಟ್ಟರು..!