Webdunia - Bharat's app for daily news and videos

Install App

11 ವರ್ಷದ ಬಾಲಕಿ ಮೇಲೆ 7 ಅಪ್ರಾಪ್ತ ಬಾಲಕರಿಂದ ಗ್ಯಾಂಗ್ ರೇಪ್

Webdunia
ಭಾನುವಾರ, 22 ಜನವರಿ 2017 (16:46 IST)
11 ವರ್ಷದ ಬಾಲಕಿಯ ಮೇಲೆ 7 ಜನ ಬಾಲಕರು ಸೇರಿ ಕನಿಷ್ಠ ಎರಡು ಬಾರಿ ಸಾಮೂಹಿಕ ಅತ್ಯಾಚಾರವೆಸಗಿದ ಹೇಯ, ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ಮೇಘಾಲಯದ ಶಿಲ್ಲಾಂಗ್‌ನಲ್ಲಿ ನಡೆದಿದೆ. 

ನೈಋತ್ಯ ಕಾಶಿ ಹಿಲ್ಸ್ ಜಿಲ್ಲೆಯ ಮಾವ್ಟೆನ್ ಗ್ರಾಮದಲ್ಲಿ ಈ ಕೀಚಕ ಕೃತ್ಯ ನಡೆದಿದ್ದು ಕಳೆದ ಡಿಸೆಂಬರ್ ತಿಂಗಳಲ್ಲಿ ಭತ್ತದ ಗದ್ದೆಯೊಂದರಲ್ಲಿ ಬಾಲಕಿಯ ಮೇಲೆ ಮೊದಲ ಬಾರಿಗೆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ತಮ್ಮ ಕುಕೃತ್ಯವನ್ನು ಅದೇ ಆರೋಪಿಗಳು ಜನವರಿ 13 ರಂದು ಆಕೆಯ ಮನೆಯಲ್ಲಿ ಪುನರಾವರ್ತಿಸಿದ್ದಾರೆ. 
 
ಬಾಲಕಿಯ ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಆರೋಪಿಗಳಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ. ಅವರು ಸಹ ಅದೇ ಗ್ರಾಮದವರಾಗಿದ್ದು, 14ರಿಂದ 16ರ ವಯಸ್ಸಿನವರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 
 
ಆರೋಪಿಗಳು ತಪ್ಪೊಪ್ಪಿಕೊಂಡಿದ್ದು ಅವರನ್ನು ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. 
 
ಕಳೆದ ವರ್ಷ ಮೇಘಾಲಯದಲ್ಲಿ ಪೋಸ್ಕೋ ಕಾಯಿದೆಯಡಿಯಲ್ಲಿ 101 ಮತ್ತು 22  ಪ್ರಕರಣಗಳು ದಾಖಲಾಗಿದ್ದವು ಕ್ರೈಮ್ ರೆಕಾರ್ಡ್ಸ್ ಬ್ಯುರೋ ಮಾಹಿತಿ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2019 ರಲ್ಲಿ ತೀರಿಕೊಂಡಿದ್ದ ಅರುಣ್ ಜೇಟ್ಲಿ 2020 ರಲ್ಲಿ ಬೆದರಿಕೆ ರಾಹುಲ್ ಗಾಂಧಿಗೆ ಬೆದರಿಕೆ ಹಾಕಿದ್ರಂತೆ

ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲು ಶಿಕ್ಷೆ, ಕಣ್ಣೀರು ಹಾಕಿದ ಅಜ್ಜ ದೇವೇಗೌಡ

ರಾಹುಲ್ ಗಾಂಧಿಯಿಂದ ಮತಗಳ್ಳತನ ಆರೋಪ: ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿತಂತ್ರ ಹೂಡಿದ ಬಿಜೆಪಿ

ಮೊಸಳೆಕಣ್ಣೀರು ಹಾಕುತ್ತಿರುವ ರಾಹುಲ್ ಗಾಂಧಿ, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಿ ಇದ್ರೂ: ಪಿ.ಸಿ.ಮೋಹನ್

ಮುಂಬೈ, ಕೋಲ್ಕತ್ತಾ ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ: ಇಂಡಿಗೋ ಮುಂದಿನ ಕ್ರಮಕ್ಕೆ ಮೆಚ್ಚುಗೆ

ಮುಂದಿನ ಸುದ್ದಿ
Show comments