Select Your Language

Notifications

webdunia
webdunia
webdunia
webdunia

ನಿರಂತರವಾಗಿ ಅತ್ಯಾಚಾರಗೈದು ಬ್ಲ್ಯಾಕ್‌ಮೇಲ್ ಮಾಡಿದಾತನನ್ನು ಹತ್ಯೆಗೈದ ಮಹಿಳೆ

ನಿರಂತರವಾಗಿ ಅತ್ಯಾಚಾರಗೈದು ಬ್ಲ್ಯಾಕ್‌ಮೇಲ್ ಮಾಡಿದಾತನನ್ನು ಹತ್ಯೆಗೈದ ಮಹಿಳೆ
ನವದೆಹಲಿ , ಶನಿವಾರ, 23 ಜುಲೈ 2016 (14:38 IST)
ನಗರದ ಮಯೂರ್ ವಿಹಾರ್ ಬಡಾವಣೆಯ ಸಮಾಚಾರ ಅಪಾರ್ಟ್‌ಮೆಂಟ್‌ನಲ್ಲಿ ನಡೆದ 64 ವರ್ಷ ವಯಸ್ಸಿನ ವ್ಯಕ್ತಿ ವಿಜಯ್ ಕುಮಾರ್ ಹತ್ಯೆಯ ಹಿನ್ನಲೆ ಬಹಿರಂಗವಾಗಿದ್ದು ಹತ್ಯೆ ಮಾಡಿದ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.  
 
ಹತ್ಯೆಯಾದ ವಿಜಯ್ ಕುಮಾರ್ 25 ವರ್ಷದ ಮಹಿಳೆಗೆ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಆಕೆಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ ಅತ್ಯಾಚಾರವೆಸಗಿದ್ದಾನೆ. ನಂತರ ಅತ್ಯಾಚಾರವೆಸಗುತ್ತಿರುವ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡತೊಡಗಿದ್ದಾನೆ.
 
ನಿರಂತರ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತ ಮಹಿಳೆ ಜುಲೈ 20 ರಂದು ವಿಜಯ್ ಕುಮಾರ್ ಹತ್ಯೆ ಮಾಡಿದ್ದಾಳೆ. ಹತ್ಯೆ ಮಾಡಿದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. 
 
ಕಳೆದ ಎರಡು ವರ್ಷಗಳ ಹಿಂದೆ ತಾನು ವಿಜಯ್ ಕುಮಾರ್‌ನನ್ನು ಭೇಟಿಯಾಗಿ ಉದ್ಯೋಗ ಕೊಡಿಸುವಂತೆ ಮನವಿ ಮಾಡಿದ್ದೆ. ಉದ್ಯೋಗ ಕೊಡಿಸುವ ನೆಪದಲ್ಲಿ ಆತ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದ. ಆದ್ದರಿಂದ, ಸೇಡು ತೀರಿಸಿಕೊಳ್ಳಲು ಆತನನ್ನು ಹತ್ಯೆ ಮಾಡಿದ್ದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.
 
ಹತ್ಯೆಯಾದ ವಿಜಯ್ ಕುಮಾರ್ ಮನೆಯ ಎದುರುಗಡೆಯಿರುವ ಸಿಸಿಟಿವಿ ದೃಶ್ಯಗಳಲ್ಲಿ ಮಹಿಳೆ ಹೊರಬರುತ್ತಿರುವುದು ಕಂಡ ಪೊಲೀಸರು ಆಕೆಯ ವಿಚಾರಣೆ ನಡೆಸಿದಾಗ ಹತ್ಯೆಯ ಹಿನ್ನೆಲೆ ಬಹಿರಂಗವಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾನೂನಿಗಿಂತ ಯಾರು ದೊಡ್ಡವರಲ್ಲ: ಸಚಿವ ಎಂ.ಆರ್.ಸೀತಾರಾಂ