Select Your Language

Notifications

webdunia
webdunia
webdunia
webdunia

ಮಾಯಾವತಿ ಬಳಿ ಅಕ್ರಮ ಹಣ ಸಂಗ್ರಹ: ಪ್ರಧಾನಿ ಮೋದಿ ಆರೋಪ

ಮಾಯಾವತಿ ಬಳಿ ಅಕ್ರಮ ಹಣ ಸಂಗ್ರಹ: ಪ್ರಧಾನಿ ಮೋದಿ ಆರೋಪ
ನವದೆಹಲಿ , ಸೋಮವಾರ, 20 ಫೆಬ್ರವರಿ 2017 (16:26 IST)
ದೇಶದಲ್ಲಿ ಜಾರಿಗೆ ತಂದ ನೋಟು ನಿಷೇಧದ ನಂತರ ಮಾಜಿ ಮುಖ್ಯಮಂತ್ರಿ, ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಬಳಿ ಅಕ್ರಮ ಹಣ ಸಂಗ್ರಹದಲ್ಲಿ ಹೆಚ್ಚಳವಾಗಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
 
ಕೇಂದ್ರ ಸರಕಾರ ದೇಶದಲ್ಲಿ ನೋಟು ನಿಷೇಧ ಜಾರಿಗೆ ತಂದ ನಂತರ ಪ್ರತಿಪಕ್ಷಗಳು ಕೋಲಾಹಲ ಸೃಷ್ಟಿಸಿದ್ದವು. ಆದರೆ, ಬದ್ಧ ವೈರಿಗಳಾದ ಸಮಾಜವಾದಿ ಪಕ್ಷ ಮತ್ತು ಬಹಜನ ಸಮಾಜ ಪಕ್ಷ ಒಂದಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಅಚ್ಚರಿ ತಂದಿದೆ ಎಂದು ಲೇವಡಿ ಮಾಡಿದ್ದಾರೆ.
 
ನೋಟು ನಿಷೇಧ ಜಾರಿ ಮಾಡುವ ಮುನ್ನ ಕೇಂದ್ರ ಸರಕಾರ ಸರಿಯಾದ ಯೋಜನೆ ರೂಪಿಸಬೇಕಿತ್ತು ಎಂದು ಮಾಯಾವತಿ ಹೇಳಿದ್ದಾರೆ. ಒಂದು ವೇಳೆ, ಒಂದು ವಾರ ಸಮಯಾವಕಾಶ ನೀಡಿದ್ದಲ್ಲಿ ಅಕ್ರಮ ಹಣ ಹೊಂದಿದವರು ಕಾನೂನಿನಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.
 
ಕೇಂದ್ರ ಸರಕಾರ ಭ್ರಷ್ಟರನ್ನು ಕಾನೂನಿನ ಖೆಡ್ಡಾಗೆ ಕೆಡುವಲು ನೋಟು ನಿಷೇಧ ಜಾರಿಗೆ ತಂದಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಪ್ರಧಾನಿ ಮೋದಿ ತಮ್ಮ ನೋಟು ನಿಷೇಧವನ್ನು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೇವಲ 8 ಲಕ್ಷಕ್ಕೆ ಮಾಡರ್ನ್ ಮನೆ ಕಟ್ಟಿಕೊಳ್ಳಿ ( ವಿಡಿಯೋ)