Select Your Language

Notifications

webdunia
webdunia
webdunia
webdunia

ಹರಿದ ಪಂಚೆ, ಶರ್ಟನಲ್ಲೇ ಹೊರಬರುತ್ತಿರುವ ಡಿಎಂಕೆ ಶಾಸಕರು

ಹರಿದ ಪಂಚೆ, ಶರ್ಟನಲ್ಲೇ ಹೊರಬರುತ್ತಿರುವ ಡಿಎಂಕೆ ಶಾಸಕರು
ಚೆನ್ನೈ , ಶನಿವಾರ, 18 ಫೆಬ್ರವರಿ 2017 (15:05 IST)
ತಮಿಳುನಾಡು ವಿಧಾನಸಭೆಯಲ್ಲಿ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಸ್ಪೀಕರ್ ಆದೇಶದಂತೆ ಮಾರ್ಷಲ್‌ಗಳು ಡಿಎಂಕೆ ಶಾಸಕರನ್ನು ಸದನದಿಂದ ಹೊರಹಾಕುತ್ತಿದ್ದಾರೆ. ಮಾರ್ಷಲ್‌‌ಗಳು ಮತ್ತು ಡಿಎಂಕೆ ಸದಸ್ಯರ ಜಟಾಪಟಿಯಲ್ಲಿ ಶಾಸಕರ ಪಂಚೆ ಹರಿದುಹೋಗಿದ್ದರಿಂದ ಹರಿದ ಪಂಚೆಯಲ್ಲಿಯೇ ಡಿಎಂಕೆ ಶಾಸಕರು ಹೊರಬಂದಿದ್ದಾರೆ.
 
ವಿಧಾನಸಭೆಯ ಕಲಾಪ 3 ಗಂಟೆಗೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅದರೊಳಗೆ ಡಿಎಂಕೆ ಶಾಸಕರನ್ನು ಹೊರಹಾಕುವಂತೆ ಸ್ಪೀಕರ್ ಧನಪಾಲ್, ಮಾರ್ಷಲ್‌ಗಳಿಗೆ ಆದೇಶ ನೀಡಿದ್ದರು. ವಿಧಾನಸಭೆಯಿಂದ ಎಲ್ಲಾ 89 ಶಾಸಕರನ್ನು ಮಾರ್ಷಲ್‌ಗಳು ಹೊರಹಾಕಿದ್ದಾರೆ.
 
 ರಹಸ್ಯ ಮತದಾನಕ್ಕೆ ನಾವು ಒತ್ತಾಯಿಸಿದ್ದರಿಂದ ನಮ್ಮನ್ನು ಬಲವಂತವಾಗಿ ಹೊರಹಾಕಲಾಗಿದೆ ಎಂದು ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ನಮ್ಮ ಒತ್ತಾಯಕ್ಕೆ ಸ್ಪೀಕರ್ ಧನಪಾಲ್ ಒಪ್ಪದೇ ನಮ್ಮನ್ನು ಬಲವಂತವಾಗಿ ಮಾರ್ಷಲ್‌ಗಳಿಂದ ಹೊರಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರನ್ನು ಭೇಟಿಯಾಗಿ ಸ್ಪೀಕರ್ ದೌರ್ಜನ್ಯವನ್ನು ವಿವರಿಸುವುದಾಗಿ ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳಿಲ್ಲದೇ ದರಿದ್ರ ಬಂದಿದೆ: ಕುಮಾರಸ್ವಾಮಿ