Webdunia - Bharat's app for daily news and videos

Install App

ಮದುವೆ ಮೆರವಣಿಗೆ:63 ಕೋಳಿಗಳ ಸಾವು!

Webdunia
ಬುಧವಾರ, 24 ನವೆಂಬರ್ 2021 (17:03 IST)
ಭುವನೇಶ್ವರ : ಭಾರತದಲ್ಲಿ ಮದುವೆಯೆಂದರೆ ಅಲ್ಲಿ ಸಂಭ್ರಮಕ್ಕೇನೂ ಕೊರತೆಯಿಲ್ಲ.
ಆದರೆ, ಸಂಗೀತ, ಪಟಾಕಿ, ನೃತ್ಯ, ಬ್ಯಾಂಡ್‌ನೊಂದಿಗೆ ನಡೆದ ಸಾಂಪ್ರದಾಯಿಕ ಭಾರತೀಯ ವಿವಾಹದ ಮೆರವಣಿಗೆಯಿಂದಾಗಿ 63 ಕೋಳಿಗಳು ಸಾವನ್ನಪ್ಪಿವೆ. ಭಾನುವಾರ ರಾತ್ರಿ ಒಡಿಶಾದಲ್ಲಿ ಮದುವೆಯ ಮೆರವಣಿಗೆ ಕೋಳಿ ಫಾರ್ಮ್ ಅನ್ನು ಹಾದುಹೋದಾಗ ಆ ಗಡಚಿಕ್ಕುವ ಶಬ್ದದಿಂದ 63 ಕೋಳಿಗಳು ಮೃತಪಟ್ಟಿವೆ ಎಂದು ಕೋಳಿ ಫಾರಂ ಮಾಲೀಕ ರಂಜಿತ್ ಕುಮಾರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮದುವೆಯ ಮೆರವಣಿಗೆ ಸಂಗೀತವು ತುಂಬಾ ಗದ್ದಲದಿಂದ ಕೂಡಿತ್ತು. ಅದು ಕೋಳಿಗಳನ್ನು ಭಯಭೀತಗೊಳಿಸಿದ್ದರಿಂದ ಧ್ವನಿಯನ್ನು ಕಡಿಮೆ ಮಾಡಲು ನಾನು ಬ್ಯಾಂಡ್ ನಿರ್ವಾಹಕರ ಬಳಿ ಮನವಿ ಮಾಡಿದೆ. ಆದರೆ ಅವರು ಕೇಳಲಿಲ್ಲ. ವರನ ಕಡೆಯ ಸಂಬಂಧಿಕರು ನನ್ನ ಜೊತೆ ಜಗಳವಾಡಿ ಮುಂದೆ ಹೋದರು ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.
ಮದುವೆಯ ಮೆರವಣಿಗೆ ಗದ್ದಲದಿಂದ ಹೆದರಿದ ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿವೆ ಎಂದು ಪಶುವೈದ್ಯರು ತಿಳಿಸಿದ್ದಾರೆ. ಮದುವೆಯನ್ನು ಆಯೋಜಿಸಿದ್ದವರು ಇದಕ್ಕೆ ಪರಿಹಾರವನ್ನು ನೀಡಲು ನಿರಾಕರಿಸಿದ್ದರಿಂದ ಪೊಲೀಸರಿಗೆ ದೂರು ನೀಡಲಾಯಿತು.
ತಮ್ಮ ವಿರುದ್ಧ ಕೇಸ್ ದಾಖಲಿಸಿದ್ದು ಗೊತ್ತಾದ ನಂತರ ಮದುವೆಯ ಆಯೋಜಕರು ಬಂದು ಕೋಳಿ ಫಾರಂ ಮಾಲೀಕರ ಜೊತೆ ಸಂಧಾನ ಮಾಡಿಕೊಂಡಿದ್ದಾರೆ. ಇದರಿಂದ ಕೋಳಿ ಫಾರಂ ಮಾಲೀಕ ಕೇಸನ್ನು ವಾಪಾಸ್ ಪಡೆದಿದ್ದಾರೆ. ಹೀಗಾಗಿ, ಕೋಳಿಗಳ ಸಾವಿಗೆ ಕಾರಣರಾದವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments