Select Your Language

Notifications

webdunia
webdunia
webdunia
webdunia

ಚಿನ್ನಾಭರಣಕ್ಕಾಗಿ ಇಂತಹ ನೀಚ ಕೃತ್ಯಕ್ಕೆ ಮುಂದಾದ ವಿವಾಹಿತೆ

ಚಿನ್ನಾಭರಣಕ್ಕಾಗಿ ಇಂತಹ ನೀಚ ಕೃತ್ಯಕ್ಕೆ ಮುಂದಾದ ವಿವಾಹಿತೆ
ಭೋಪಾಲ್ , ಭಾನುವಾರ, 1 ಮಾರ್ಚ್ 2020 (09:02 IST)
ಭೋಪಾಲ್ : ವಿವಾಹಿತ 40 ವರ್ಷದ ಮಹಿಳೆಯೊಬ್ಬಳು  70 ವರ್ಷದ ನಿವೃತ್ತ ಸಹಾಯಕ ಇಂಜಿನಿಯರ್ ನನ್ನು ಮದುವೆಯಾಗಿ ಆತನ ಮನೆಯಲ್ಲಿರುವ ಚಿನ್ನಾಭರಣಗಳನ್ನು ದೋಜಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.


ರಾಣಿ ಮಿಶ್ರಾ ಇಂತಹ ನೀಚ ಕೃತ್ಯ ಎಸಗಿದ ಆರೋಪಿ. ಈಕೆ ತನ್ನ ಪತಿ ಶಂಕರ್ ದುಬೆ ಸಹಾಯದಿಂದ ಹೆಂಡತಿಯನ್ನು ಕಳೆದುಕೊಂಡು ಏಕಾಂಗಿಯಾಗಿದ್ದ 70 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಆ ವ್ಯಕ್ತಿ ತನ್ನ ಮೊದಲ ಹೆಂಡತಿಯ ಚಿನ್ನಾಭರಣಗಳನ್ನು ಈಕೆಗೆ ನೀಡಿದ್ದಾನೆ. ಚಿನ್ನ ಕೈಗೆ ಬರುತ್ತಿದ್ದಂತೆ ತಾಯಿಗೆ ಹುಷಾರಿಲ್ಲ ನೋಡಿಕೊಂಡು ಬರುವುದಾಗಿ ನೆಪ ಹೇಳಿ ಅಲ್ಲಿಂದ ಪರಾರಿಯಾಗಿದ್ದಾಳೆ.


ಬಳಿಕ ವಿಚಾರ ತಿಳಿದ ವ್ಯಕ್ತಿ ತಾನು ಮೋಸ ಹೋಗಿರುವುದನ್ನು ಅರಿತು ಭೋಪಾಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿ ಹಾಗೂ ಆಕೆಯ ಪತಿಯನ್ನು ಬಂಧಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮಹತ್ಯೆ ಗೆ ಶರಣಾದ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಕೆ.ಸರಳಾಯ