Webdunia - Bharat's app for daily news and videos

Install App

ಮತ್ತೊಂದು ಮ್ಯಾರಥಾನ್ ಮದುವೆ

Webdunia
ಭಾನುವಾರ, 5 ಫೆಬ್ರವರಿ 2017 (14:31 IST)
ಮೊನ್ನೆ ತಾನೇ ಮಹಾರಾಷ್ಟ್ರದ ಜೋಡಿಯೊಂದು ಮ್ಯಾರಥಾನ್ ಓಡಿ ಮದುವೆಯಾದ ಕಥೆ ಓದಿದ್ದೀರಿ. ಮತ್ತೀಗ ಬೆಂಗಳೂರಿನ ಜೋಡಿಯೊಂದು ಇದೇ ರೀತಿಯಲ್ಲಿ ವಿವಾಹ ಬಂಧನಕ್ಕೊಳಗಾಗಿದೆ. 
ಬೆಂಗಳೂರು ಮೂಲದ ಅನಂತ ತ್ರಿವೇದಿ (31) ಮತ್ತು ಕವಿತಾ ಬಾತ್ರಾ (28) ಇಂದು ಮುಂಜಾನೆ ರಾಜಸ್ಥಾನದ ಜೈಪುರದಲ್ಲಿ 25ಕೀಲೋಮೀಟರ್ ಓಡಿ ಫಿನಿಶಿಂಗ್ ಲೈನ್‌ನಲ್ಲಿ ಹಾರ ಬದಲಾಯಿಸಿಕೊಂಡು ಸತಿಪತಿಗಳಾದರು. 
 
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಮತ್ತು ಕೋರಮಂಗಲದಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಅನಿಲ್ ಮ್ಯಾರಥಾನ್ ಓಡಿದ ಬಳಿಕ ಮದುವೆಯನ್ನು ಮಾಡಿಕೊಳ್ಳಬೇಕೆಂಬ ತಮ್ಮ ಇಚ್ಛೆಯನ್ನು ಎಂಜಿನಿಯರ್ ಆಗಿರುವ ತಮ್ಮ ಭಾವಿ ಪತ್ನಿ ಕವಿತಾ ಬಳಿ ಹೇಳಿಕೊಂಡಿದ್ದರು. 
 
ಪತಿಯ ಬಯಕೆಗೆ ಕವಿತಾ ಕೂಡ ಸಮ್ಮತಿ ಸೂಚಿಸಿದ್ದು, ಅದರಂತೆ ಇಂದು ಅವರಿಬ್ಬರು ಮ್ಯಾರಥಾನ್ ಓಡಿ ಮದುವೆಯಾಗಿದ್ದಾರೆ.  
 
ಮಹಾರಾಷ್ಟ್ರದ ಸತಾರ ಜಿಲ್ಲೆಯ ಜಾವಿಲ್ ತೆಹ್ಸಿಲ್ ನಿವಾಸಿಗಳಾದ ನವನಾಥ್ ಹಾಗೂ ಪೂನಂ ಎಂಬುವವರು ಕೂಡ ಶುಕ್ರವಾರ  ಹೀಗಾಗಿ 25 ಕೀಲೋಮೀಟರ್ ಓಡಿಕೊಂಡು ವಿವಾಹ ನೋಂದಣಿ ಕಚೇರಿಗೆ ಹೋಗಿ ವಿವಾಹವಾಗಿದ್ದಾರೆ. 
 
ತವರಿಗೆ ಹಿಂತಿರುಗಿದ ಬಳಿಕ ಸಾಂಪ್ರದಾಯಿಕ ಮದುವೆ ಮಾಡಿಸಲು ಅನಂತ್- ಕವಿತಾ ಪೋಷಕರು ನಿರ್ಧರಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments