Select Your Language

Notifications

webdunia
webdunia
webdunia
webdunia

ಮದ್ಯಪಾನ ನಿಷೇಧದ ನಂತ್ರ ಅಪರಾಧ ಪ್ರಮಾಣದಲ್ಲಿ ಇಳಿಕೆ: ನಿತೀಶ್ ಕುಮಾರ್

ಮದ್ಯಪಾನ ನಿಷೇಧದ ನಂತ್ರ ಅಪರಾಧ ಪ್ರಮಾಣದಲ್ಲಿ ಇಳಿಕೆ: ನಿತೀಶ್ ಕುಮಾರ್
ಪಾಟ್ನಾ , ಬುಧವಾರ, 25 ಮೇ 2016 (12:04 IST)
ಬಿಹಾರ್ ರಾಜ್ಯದಲ್ಲಿ ಜಂಗಲ್ ರಾಜ್ ಮರಳಿದೆ ಎನ್ನುವ ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ರಾಜ್ಯದಲ್ಲಿ ಮಂಗಲ್ ರಾಜ್ ಇದೆ ಎಂದು ಹೇಳಿದ್ದಾರೆ.  
 
ವಿಪಕ್ಷಗಳು ರಾಜ್ಯದಲ್ಲಿ ಜಂಗಲ್ ರಾಜ್ ಇದೆ ಎಂದು ಆರೋಪಿಸುತ್ತಿವೆ. ಆದರೆ, ಬಿಹಾರ್‌ನಲ್ಲಿ ಮಂಗಲ್ ರಾಜ್ ಇದೆ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅಪರಾಧಿಗಳು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ಖಚಿತ ಎಂದು ಸ್ಪಷ್ಟಪಡಿಸಿದರು.
 
ರಾಜ್ಯದಲ್ಲಿ ಅಪರಾಧ ಸಂಖ್ಯೆಗಳಲ್ಲಿ ಹೆಚ್ಚಳವಾಗುತ್ತಿವೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದ ಅವರು ರಾಜ್ಯದಲ್ಲಿ ಮದ್ಯಪಾನ ನಿಷೇಧ ಹೇರಿದ ನಂತರ ಅಪರಾಧ ಚಟುವಟಿಕೆಗಳಲ್ಲಿ ಹೆಚ್ಚಳವಾಗಿದೆ ಎಂದರು.
 
ಮದ್ಯಪಾನ ನಿಷೇಧ ಜಾರಿಯ ನಂತರ ದರೋಡೆ, ಹಪ್ತಾ ವಸೂಲಿ, ಕಳ್ಳತನ, ಹತ್ಯೆ ಪ್ರಕರಣಗಳಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. 


ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೆನ್ಸೆಕ್ಸ್: ಭರ್ಜರಿ ಚೇತರಿಕೆ ಕಂಡ ಶೇರುಪೇಟೆ ಸೂಚ್ಯಂಕ